ಕೋಟ : ಸಾಲಿಗ್ರಾಮ ಗುರು ನರಸಿಂಹ ದೇಗುಲದಲ್ಲಿ ನ.30ರಂದು ಜರಗಿದ ದೀಪೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭಾ ವೇದಿಕೆಯಲ್ಲಿ ಸಾಧಕರಿಗೆ ಸಮ್ಮಾನ ನಡೆಯಿತು.ಶಾಸಕ ಕಿರಣ್ ಕುಮಾರ್ ಕೊಡ್ಡಿ ಮಾತನಾಡಿ, ಸಾಲಿಗ್ರಾಮ ಗುರುನರಸಿಂಹ ದೇಗುಲಕ್ಕೆ ವಿಶಿಷ್ಟವಾದ ಧಾರ್ಮಿಕ ಹಿನ್ನೆಲೆ ಇದೆ ಆಡಳಿತ ಮಂಡಳಿ ಉತ್ತಮ ಯೋಜನೆಗಳನ್ನು ಹಾಕಿಕೊಳ್ಳುತ್ತಿರುವುದ ಖುಷಿಯ ವಿಚಾರ ಎಂದರು
ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್. ಕಾರಂತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕöÈತರಾದ ಕೆ. ತಾರಾನಾಥ ಹೊಳ್ಳ, ಚಿತ್ತೂರು ಪ್ರಭಾಕರ ಆಚಾರ್ಯ, ಪಿ. ವಿ. ಆನಂದ, ಸಮೃದ್ಧಿಎಸ್.ಮೊಗವೀರ ಹಾಗೂ ಯಕ್ಷಗಾನ ಅಕಾಡೆಮಿಯ ಪುಸ್ತಕ ಪ್ರಶಸ್ತಿಗೆ ಪಾತ್ರರಾದ ಸುಜಯೀಂದ್ರ ಹಂದೆ, ಈಜುಪಟು ಶ್ರೀಧರ್ ಉಳಿತ್ತಾಯ, ನಿವೃತ್ತ ಶಿಕ್ಷಕ ಜನಾರ್ಧನ ಹೊಳ್ಳ ಶೈಕ್ಷಣಿಕ ಸಾಧಕರಾದ ನರೇಂದ್ರಕುಮಾರ ಕೋಟ, ಸತೀಶ್ಚಂದ್ರ ಶೆಟ್ಟಿ ವೇ. ಮೂ.ವಿಜಯಕುಮಾರ ಅಡಿಗ, ಮತ್ತು ಅಂತಾರಾಷ್ಟಿçÃಯ ಈಜು ಸ್ಪರ್ಧೆಗೆ ಆಯ್ಕೆಯಾಗಿರುವ ಕೋಡಿಕನ್ಯಾಣದ ಗೋಪಾಲ ಖಾರ್ವಿ ಅವರನ್ನು ಸಮ್ಮಾನಿಸಲಾಯಿತು.
ಸಾಲಿಗ್ರಾಮ ಪ.ಪಂ. ಅಧ್ಯಕ್ಷೆ ಸುಕನ್ಯಾ ಶೆಟ್ಟಿ ಕೂಟ ಮಹಾಜಗತ್ತು ಪ್ರಧಾನ ಕಾರ್ಯದರ್ಶಿ ಸುರೇಶ್ ತುಂಗ ಮೊದಲಾದವರಿದ್ದರು.ಆಡಳಿತ ಮಂಡಳಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ ಸ್ವಾಗತಿಸಿದರು.ನಾಗರತ್ನ ಹೇರ್ಳೆ ಕಾರ್ಯಕ್ರಮ ನಿರೂಪಿಸಿದರು. ಅಕ್ಷತಾ ಗಿರೀಶ್ ಸಮ್ಮಾನಿತರನ್ನು ಪರಿಚಯಿಸಿದರು