Home » ಕರಾವಳಿ ಅಭಿವೃದ್ಧಿಗೆ ಪೂರಕವಾಗದ ನೀರಸ ಬಜೆಟ್‌
 

ಕರಾವಳಿ ಅಭಿವೃದ್ಧಿಗೆ ಪೂರಕವಾಗದ ನೀರಸ ಬಜೆಟ್‌

ಶಾಸಕ ಗುರುರಾಜ್‌ ಗಂಟಿಹೊಳೆ

by Kundapur Xpress
Spread the love

ರಾಜ್ಯ ಬಜೆಟ್‌ ಅಭಿವೃದ್ಧಿಗೆ ಪೂರಕವಾಗದೆ, ವಿಶೇಷವಾಗಿ ಕರ್ನಾಟಕದ ಕರಾವಳಿ ಭಾಗವನ್ನು ಸಂಪೂರ್ಣ ಕಡೆಗಣಿಸಿದಂತಿದೆ. ಕರಾವಳಿ ಪ್ರದೇಶಗಳಿಗೆ ಸಂಬಂಧಿಸಿದ ಯಾವುದೇ ಪ್ರಮುಖ ಹೊಸ ಯೋಜನೆಗಳು ಅಥವಾ ವಿಶೇಷ ಅನುದಾನ ಘೋಷಣೆಗಳು ಬಜೆಟ್‌ನಲ್ಲಿ ಕಾಣಿಸಿಲ್ಲಿ ಅಭಿವೃದ್ಧಿ ಶೂನ್ಯ ನೀರಸ ಬಜೆಟ್‌ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್‌ ಗಂಟಿಹೊಳೆ ಟೀಕಿಸಿದ್ದಾರೆ.

ಕರಾವಳಿ ಭಾಗದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವಹಿಸುವ ಮೀನುಗಾರಿಕೆ ಹಾಗೂ ಕೃಷಿ ಕ್ಷೇತ್ರಗಳಿಗೆ ಉತ್ತೇಜನ ನೀಡುವ ಯಾವ ಘೋಷಣೆಯೂ ಇಲ್ಲ. ಬಂದರು ಅಭಿವೃದ್ಧಿ, ಕೃಷಿ ಮೂಲಸೌಕರ್ಯ, ಉದ್ಯೋಗ ಸೃಷ್ಟಿ ಮುಂತಾದ ವಿಷಯಗಳಿಗೂ ಬಜೆಟ್‌ನಲ್ಲಿ ಸಮರ್ಪಕ ಪ್ರಾಮುಖ್ಯತೆ ದೊರಕಿಲ್ಲ. ಕೊಲ್ಲೂರು ದೇವಸ್ಥಾನ ಅಭಿವೃದ್ಧಿ ಸಂಬಂದ ಈ ಹಿಂದೆ ಸದನದಲ್ಲಿ ಪ್ರಸ್ತಾಪಿಸಲಾಗಿತ್ತು. ಅದರಂತೆ ಶ್ರೀ ಕೊಲ್ಲೂರು ಮುಕಾಂಬಿಕ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗಿದೆ.
ಒಟ್ಟಾರೆ ಕರಾವಳಿ ಪ್ರದೇಶಗಳ ಅಭಿವೃದ್ಧಿಗೆ ಉತ್ತೇಜನ ನೀಡದ, ಹೊಸ ದಿಕ್ಕು ತೋರಿಸದ ನೀರಸ ಬಜೆಟ್‌. ಸರ್ಕಾರದ ಪರವಾಗಿ ಮಂಡಿಸಲಾದ ಈ ಬಜೆಟ್‌ಗೆ ಆಡಳಿತ ಪಕ್ಷದ ಸದಸ್ಯರಿಂದಲೂ ಹೆಚ್ಚಿನ ಉತ್ಸಾಹದ ಪ್ರತಿಕ್ರಿಯೆ ಕಾಣಿಸದಿರುವುದು ರಾಜಕೀಯ ವಲಯದಲ್ಲಿಯೂ ಚರ್ಚೆಗೆ ಕಾರಣವಾಗಿದೆ ಎಂದು ಶಾಸಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

Related Articles

error: Content is protected !!