Home » ಬಡ ರೈತರಿಗೆ ಭೂಮಿ ಹಕ್ಕು ನೀಡುವಲ್ಲಿ ಅಧಿಕಾರಿಗಳ ಅಸಡ್ಡೆ ಸಹಿಸಲು ಸಾಧ್ಯವಿಲ್ಲ
 

ಬಡ ರೈತರಿಗೆ ಭೂಮಿ ಹಕ್ಕು ನೀಡುವಲ್ಲಿ ಅಧಿಕಾರಿಗಳ ಅಸಡ್ಡೆ ಸಹಿಸಲು ಸಾಧ್ಯವಿಲ್ಲ

ಅರ್ಹ ಅಕ್ರಮ ಸಕ್ರಮ ಕಡತಗಳ ವಿಲೇವಾರಿಗೆ ವಿನಾ ಕಾರಣ ವಿಳಂಬ ಮಾಡಿದರೆ ನೇರ ಕ್ರಮಕ್ಕೆ ಶಿಫಾರಸ್ಸು

by Kundapur Xpress
Spread the love

ಬೈಂದೂರು : ಅಕ್ರಮ ಸಕ್ರಮ ಸಭೆಯಲ್ಲಿ ಕೆಂಡಾ ಮಂಡಲರಾದ ಬೈಂದೂರು ಶಾಸಕರು ಸರ್ವೇ ಇಲಾಖೆ ಹಾಗೂ ತಾಲೂಕು ಕಚೇರಿ ಸಿಬ್ಬಂದಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಲು ಸೂಚನೆ.

ಬೈಂದೂರು ತಾಲೂಕು ಕಚೇರಿಯಲ್ಲಿ ಬೈಂದೂರು ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿ ಹೊಳೆಯವರ ಅಧ್ಯಕ್ಷತೆಯಲ್ಲಿ ನಡೆದ ಅಕ್ರಮ ಸಕ್ರಮ ಕಡತ ವಿಲೇವಾರಿ ಸಭೆಯಲ್ಲಿ ತಾಲೂಕು ಕಚೇರಿ ಹಾಗೂ ಸರ್ವೇ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಅಕ್ರಮ ಸಕ್ರಮ ದಡಿ ಅರ್ಜಿ ಸಲ್ಲಿಸಿರುವ ಅರ್ಹ ಕಡತಗಳನ್ನು ಮಂಜೂರು ಮಾಡಲು ಅಸಡ್ಡೆ ತೋರಿಸುತ್ತಿರುವ ಹಾಗೂ ವಿನಾ ಕಾರಣ ವಿಳಂಬ ಮಾಡುತ್ತಿರುವ ಸಿಬ್ಬಂದಿಗಳ ಮೇಲೆ ಕೆಂಡಾ ಮಂಡಲರಾಗಿ ಅವರನ್ನು ತರಾಟೆಗೆ ತೆಗೆದು ಕೊಂಡರು. ಹಾಗೂ ಇದಕ್ಕೆ ಕಾರಣರಾದವರ ವಿರುದ್ದ ನೇರ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು ಹಾಗೂ ಇರುವ ಸೀಮಿತ ಅರ್ಹ ಅರ್ಜಿಗಳನ್ನು ಕಾಲ ಮಿತಿಯಲ್ಲಿ ವಿಲೇವಾರಿ ಮಾಡದೇ ತಾಂತ್ರಿಕ ಸಮಸ್ಯೆಗಳ ನೆಪವನ್ನು ಮುಂದಿಟ್ಟು ವರ್ಷಗಟ್ಟಲೆ ಅರ್ಜಿಗಳನ್ನು ಮಂಜೂರಾತಿಗೆ ಪ್ರಯತ್ನಿಸದೇ ಇರುವುದನ್ನು ಸಹಿಸಲು ಸಾಧ್ಯವಿಲ್ಲ.
ಸರ್ವೇ ಇಲಾಖೆ ಹಾಗೂ ತಾಲೂಕು ಕಚೇರಿ ವಿಭಾಗಗಳು ಸಮನ್ವಯ ಕಾರ್ಯ ನಿರ್ವಹಿಸಿ ಬಾಕಿ ಉಳಿದಿರುವ ಹಕ್ಕು ಪತ್ರ ವಿತರಣೆಗೆ ಕ್ರಮವಾಗಬೇಕು ಎಂದರು06 ಜನ ಅರ್ಹ ಫಲಾಭವಿಗಳಿಗೆ ಸಾಗುವಳಿ ಚೀಟಿ ವಿತರಣೆ : ಜಡ್ಕಲ್,ಮುದೂರು ಹಾಗೂ ಹಳ್ಳಿ ಹೊಳೆ ಗ್ರಾಮಗಳ ಅರ್ಹ 06 ಜನ ರೈತರಿಗೆ ಇದೇ ಸಂದರ್ಭದಲ್ಲಿ ಶಾಸಕರು ಹಕ್ಕು ಪತ್ರ ವಿತರಣೆ ಮಾಡಿದರು.

ಸಭೆಯಲ್ಲಿ ಬೈಂದೂರು ತಾಲೂಕು ತಹಸೀಲ್ದಾರ್ ರಾಮ ಚಂದ್ರಪ್ಪ, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಸರ್ವೇ ಮೇಲ್ವಿಚಾರಕರು, ಸರ್ವೇಯರುಗಳು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ತಾಲೂಕು ಕಚೇರಿ ವಿಷಯ ನಿರ್ವಾಹಕರುಗಳು ಉಪಸ್ಥಿತರಿದ್ದರು.

 

Related Articles

error: Content is protected !!