120
ಕುಂದಾಪುರ : ಗಂಗೊಳ್ಳಿಯ ಹಳೆ ಅಳಿವೆ ಪ್ರದೇಶದ ಕಡಲ ಕಿನಾರೆಉಯಲ್ಲಿ ದೋಣಿ ದುರಂತದಿಂದ ನಾಪತ್ತೆಯಾಗಿದ್ದ ಮೂವರ ಪೈಕಿ ಇಬ್ಬರು ಮೀನುಗಾರರ ಮೃತದೇಹ ಪತ್ತೆಯಾಗಿದೆ.
ಸಮುದ್ರದಲ್ಲಿ ನಾಪತ್ತೆಯಾಗಿದ್ದ ಮೀನುಗಾರರಾದ ಜಗನ್ನಾಥ ಖಾರ್ವಿ ಅವರ ಮೃತದೇಹವು ಸಂಜೆ ಕೋಡಿ ಬೀಚ್‌ನ ಕಿನಾರ ಸಮೀಪ ಪತ್ತೆಯಾಗಿದೆ. ಮತ್ತೋರ್ವ ಲೋಹಿತ್ ಖಾರ್ವಿ ಅವರ ಮೃತದೇಹ ನಿನ್ನೆ ಬೆಳಿಗ್ಗೆ ಕುಂದಾಪುರ ನಗರದ ಕೋಡಿ ಲೈಟ್ ಹೌಸ್ ಬಳಿಯ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು ಇನ್ನೋರ್ವ ಮೀನುಗಾರ ಸುರೇಶ್ ಖಾರ್ವಿ ಅವರ ಸುಳಿವು ಲಭ್ಯವಾಗಿಲ್ಲ ಶೋಧ ಕಾರ್ಯ ಮುಂದುವರಿದಿದೆ

