Home » ಸಿಆರ್‌ಝಡ್ ಕಚೇರಿ ಸ್ಥಳಾಂತರಕ್ಕೆ ಆಗ್ರಹ
 

ಸಿಆರ್‌ಝಡ್ ಕಚೇರಿ ಸ್ಥಳಾಂತರಕ್ಕೆ ಆಗ್ರಹ

by Kundapur Xpress
Spread the love

ಬೆಂಗಳೂರು : ವಿಧಾನಸಭಾ ಕಲಾಪದಲ್ಲಿ ಬೈಂದೂರು ಶಾಸಕ ಮರವಂತೆ ಬೀಚ್‌ ಅಭಿವೃದ್ಧಿಯಲ್ಲಿ ಉಂಟಾಗುತ್ತಿರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ ಸದಸನದ ಗಮನ ಸೆಳೆದರು. ಸದನದಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿಯವರ ಲಕ್ಷ ದ್ವೀಪ ಭೇಟಿಯು ಪ್ರವಾಸೋದ್ಯಮ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿತು. ಬಹುತೇಕ ರಾಜ್ಯಗಳು ಈ ಅವಕಾಶವನ್ನು ಸಕಾರಾತ್ಮಕವಾಗಿ ಬಳಸಿಕೊಂಡಿದೆ. ಆದರೆ ಕರ್ನಾಟಕ ರಾಜ್ಯ ಈ ವಿಚಾರದಲ್ಲಿ ಉದಾಸೀನತೆ ತೋರಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಕಾರ್ಯವೈಖರಿಗೆ ಆಕ್ಷೇಪಿಸಿದರು.

ಕರ್ನಾಟಕದಲ್ಲಿ ಕಡಲ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದೆ, ಬೀಚ್ ಪ್ರವಾಸೋದ್ಯಮವು ಉದ್ಯೋಗವಕಾಶಗಳ ಆಗರವಾಗಿದೆ. ಆದರೆ ಕೆಲವೊಂದು ಕಾನೂನಿನ ಅಡಚಣೆಗಳು ಬೀಚ್‌ ಪ್ರವಾಸೋದ್ಯಮಕ್ಕೆ ಅಡ್ಡಿ ಮಾಡುತ್ತಿವೆ. ಕಡಲ ಕಿನಾರೆಯ ಪ್ರವಾಸೋದ್ಯಮಕ್ಕೆ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಅಭಿವೃದ್ಧಿಗೆ ಕಂಟಕವಾಗಿರುವ ಸಿಆರ್‌ಝೆಡ್‌ ನಿಯಮಾವಳಿಗಳನ್ನು ರಾಜ್ಯದಲ್ಲಿ ಸರಳೀಕರಣಗೊಳಿಸಬೇಕು. ಮರವಂತೆಯಲ್ಲಿ ಪ್ರವಾಸಧ್ಯಮಕ್ಕೆ ಸಂಬಂಧಪಟ್ಟಂತಹ ಯೋಜನೆಗಳು ಸಿಆರ್‌ಝೆಡ್ ಕಾರಣದಿಂದ ಸ್ಥಗಿತಗೊಂಡಿದೆ. ಕೇರಳ, ಗೋವಾ ರಾಜ್ಯಗಳಂತೆ ಕರ್ನಾಕದಲ್ಲೂ ಸಿಆರ್‌ಝೆಡ್‌ ನಿಯಮಾವಳಿ ಸರಳೀಕರಣಗೊಳಿಸಲು ಆಗ್ರಹಿಸಿದರು ಮತ್ತು ಸಿಆರ್‌ಝಡ್ ಕಚೇರಿಯನ್ನು ಕರಾವಳಿ ಭಾಗಕ್ಕೆ ಸ್ಥಳಾಂತರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಮರವಂತೆ ಅಭಿವೃದ್ಧಿಗೆ ತೊಡಕಾಗಿರುವ ಅಂಶಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಅಗತ್ಯ ಕ್ರಮವಹಿಸುವುದಾಗಿ ಪ್ರವಾಸೋದ್ಯಮ ಸಚಿವರ ಪರವಾಗಿ ಸಚಿವ ಕೃಷ್ಣ ಬೈರೇಗೌಡ ಸದನದಲ್ಲಿ ಉತ್ತರಿಸಿದರು

   

Related Articles

error: Content is protected !!