Home » ಕೈ ಅಪಪ್ರಚಾರದಿಂದ ಬಿಜೆಪಿಗೆ ಲಾಭ:
 

ಕೈ ಅಪಪ್ರಚಾರದಿಂದ ಬಿಜೆಪಿಗೆ ಲಾಭ:

ಎಚ್ಚಿಕೆ

by Kundapur Xpress
Spread the love

ಕಲಬುರಗಿ: ನ್ಯಾಯಾಧೀಶರ ಮುಂದೆ ರಹಸ್ಯವಾಗಿ ಕೊಟ್ಟಿರುವ ಹೇಳಿಕೆ ಮಾಧ್ಯಮದ ಮುಂದೆ ಬಿಟ್ಟವರು ಯಾರು? ಈ ವಿಚಾರ ಹೇಗೆ ಹೊರಗಡೆ ಬಂತು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಪ್ರಶ್ನಿಸಿದರು.

ಪ್ರಜ್ವಲ್ ಪೆನ್‌ ಡೈವ್ ವಿಚಾರ ವಾಗಿ ಶನಿವಾರ ಸುದ್ದಿಗಾರ ರೊಂದಿಗೆ ಮಾತನಾಡಿ, 2021ರಲ್ಲಿ ನಡೆದ ಘಟನೆಯ ಕುರಿತು ಯಾರೋ ಒಬ್ಬ ಹೆಣ್ಣು ಮಗಳು ನ್ಯಾಯಾಧೀಶರ ಎದುರುಗಡೆ ರಹಸ್ಯವಾಗಿ ಕೊಟ್ಟಿರುವ ಹೇಳಿಕೆ ಹೇಗೆ ಆಚೆಗೆ ಬಂತು? ಅದನ್ನು ಹೊರಗಡೆ ತಂದವರು ಯಾರು? ಕಾಂಗ್ರೆಸ್ ನವರಿಗೆ ತನಿಖೆಯ ಮೂಲಕ ಸಂತ್ರಸ್ತರಿಗೆ ನ್ಯಾಯ ಕೊಡಿಸೋದು ಬೇಕಾಗಿಲ್ಲ. ಅವರಿಗೆ ಕೇವಲ ಪ್ರಚಾರವಷ್ಟೆ ಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಸನ ಪ್ರಕರಣಕ್ಕೂ ಬಿಜೆಪಿಯವರಿಗೂ ಸಂಬಂಧವಿಲ್ಲ. ನಮ್ಮ ಕುಟುಂಬಕ್ಕೆ ತಂದು ತಳುಕು ಹಾಕಿರೋದಕ್ಕೆ ನಾನೇ ಉತ್ತರ ಕೊಡಬೇಕಾಗಿದೆ. ಕಾಂಗ್ರೆಸ್ ಏನೇ ಅಪಪ್ರಚಾರ ಮಾಡಿದರು ಪ್ರಯೋಜನವಿಲ್ಲ ಅದೆಲ್ಲ ಬಿಜೆಪಿಗೆ ಲಾಭವಾಗುತ್ತಿದೆ ಎಂದರು

   

Related Articles

error: Content is protected !!