Home » ಹಂಗಾರಕಟ್ಟೆ ಬಾಳ್ಕುದ್ರು ಮಠದ ನೃಸಿಂಹಾಶ್ರಮ ಶ್ರೀ ಬ್ರಹ್ಮೈಕ್ಯ
 

ಹಂಗಾರಕಟ್ಟೆ ಬಾಳ್ಕುದ್ರು ಮಠದ ನೃಸಿಂಹಾಶ್ರಮ ಶ್ರೀ ಬ್ರಹ್ಮೈಕ್ಯ

by Kundapur Xpress
Spread the love

ಕೋಟ: ಹಂಗಾರಕಟ್ಟೆ ಬಾಳ್ಕುದ್ರು ಮಠದ ಹಿರಿಯ ಯತಿ ಶ್ರೀ ನೃಸಿಂಹಾಶ್ರಮ ಸ್ವಾಮಿಜಿ ಅಸೌಖ್ಯದಿಂದ ಶುಕ್ರವಾರ ಬೆಳಗ್ಗೆ ಬ್ರಹ್ಮಕ್ಯರಾದರು. ಅವರಿಗೆ 53 ವರ್ಷ ವಯಸ್ಸಾಗಿತ್ತು

ಕಿಡ್ನಿಗೆ ಸಂಬಂಧಿಸಿದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳು ಇತ್ತೀಚೆಗೆ ಶಿಷ್ಯ ಸ್ವೀಕಾರ ನಡೆಸಿ ವಿಶ್ರಾಂತಿಯಲ್ಲಿದ್ದರು. ಡಯಾಲಿಸೀಸ್ ಚಿಕಿತ್ಸೆಗೆ ತೆರಳುತ್ತಿದ್ದ ಅವರು ಶುಕ್ರವಾರ ಬೆಳಗ್ಗೆ ಚಿಕಿತ್ಸೆಗೆ ತೆರಳುವ ಸಂದರ್ಭ ಅನಾರೋಗ್ಯ ಉಲ್ಬಣಗೊಂಡು ಕೊನೆಯುಸಿರೆಳೆದಿದ್ದಾರೆ.

ಶ್ರೀಗಳು ಪೂರ್ವಾಶ್ರಮದಲ್ಲಿ ಚಿಕ್ಕಮಗಳೂರು ಜಿಲ್ಲೆ ಬೆಳಲ್‌ ಕೊಪ್ಪದವರು. ಇಲ್ಲಿನ ಮೀನಾಕ್ಷ್ಯಮ್ಮ ಮತ್ತು ವೆಂಕಟರಮಣ ಉಡುಪ ದಂಪತಿಯ ಎಂಟನೇ ಪುತ್ರರಾದ ಇವರು ಡಿಪ್ಲೋಮಾ ಪಾಲಿಟೆಕ್ನಿಕ್ ಪದವೀಧರರು. ಆದರೆ ಧಾರ್ಮಿಕ ಸೆಳೆತಕ್ಕೊಳಗಾಗಿ ವೇದಾಧ್ಯಯನದಲ್ಲಿ ತೊಡಗಿಸಿಕೊಂಡರು,

ಉಡುಪಿ ಜಿಲ್ಲೆಯ ಶಾಂಕರ ಪರಂಪರೆಯ ಏಕೈಕಸ್ಥಾರ್ತ ಶಿವಳ್ಳಿ ಅದೈತ ಮಠವಾದ ಬಾಳೆಕುದ್ರು ಮಠದ ಪೂರ್ವ ಯತಿ ಶ್ರೀ ಶಂಕರಾಶ್ರಮ ಸ್ವಾಮೀಜಿ ಬ್ರಹ್ಮಕ್ಯರಾದ ಬಳಿಕ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ 2006ರಲ್ಲಿ ಬಾಳೆಕುದ್ರು ಮಠದ ಪೀಠಾಧಿಪತಿ ಗಳಾದರು. ಹಲವು ವರ್ಷಗಳಿಂದ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಶ್ರೀಗಳಿಗೆ ವಾರಕ್ಕೆರಡು ಬಾರಿ ಡಯಾಲಿಸಿಸ್ ನಡೆಯುತ್ತಿತ್ತು.

ಶೃಂಗೇರಿ ಶ್ರೀಗಳ ಮಾರ್ಗದರ್ಶನದಲ್ಲಿ ಹೆಬ್ಬಾರ ಮಠದ ಕೊದಂಡಶ್ರಮ ಶ್ರೀಗಳು ನೃಸಿಂಹಾಶ್ರಮ ಸ್ವಾಮಿಜಿಗಳಿಗೆ ಸನ್ಯಾಸ ದೀಕ್ಷೆ ನೀಡಿದ್ದರು. ಶ್ರೀಗಳ ಅಂತಿಮ ವಿಧಿವಿಧಾನಗಳು ಶುಕ್ರವಾರ ಸಂಜೆ ಸ್ಥಾರ್ತ ಭಾಗವತ ಸಂಪ್ರದಾಯದಂತೆ ಮಠದ ಆವರಣದಲ್ಲಿ ನೆರವೇರಿತು

 

Related Articles

error: Content is protected !!