ಕುಂದಾಪುರ : ಶ್ರೀ ಸಿಧ್ದಿವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ದಿವಂಗತ ವೇದಮೂರ್ತಿ ಹಟ್ಟಿಅಂಗಡಿ ರಾಮಚಂದ್ರ ಭಟ್ಟರ ದಿವ್ಯ ಸಂಕಲ್ಪದ ಸ್ವರೂಪದಂತೆ ಇತಿಹಾಸ ಪ್ರಸಿದ್ಧ ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ನವೀಕೃತ ದೇವಾಲಯದ ಲೋಕಾರ್ಪಣೆಗೆ ಸರ್ವ ಸಿದ್ಧತೆಗಳು ನಡೆದಿದ್ದು, ಮಾರ್ಚ್ 13 ರಿಂದ 17ರ ತನಕ ಧಾರ್ಮಿಕ, ಸಾಂಸ್ಕೃತಿಕ ಸಮಾರಂಭಗಳು ನಡೆಯಲಿವೆ. ಬ್ರಹ್ಮಕಲಶೋತ್ಸವ, ಲಕ್ಷಮೋದಕ ಹೋಮ ಶತ ಚಂಡಿಕಾ ಯಾಗ 2016 ತೆಂಗಿನಕಾಯಿ ಗಣಹೋಮ, ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಭಕ್ತಾಭಿಮಾನಿಗಳು ಈ ಐದು ದಿನಗಳ ಧಾರ್ಮಿಕ ಉತ್ಸವಗಳಲ್ಲಿ ಪಾಲ್ಗೊಳ್ಳಬೇಕೆಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಬಿ. ಅಪ್ಪಣ್ಣ ಹೆಗ್ಡೆ, ಗೌರವಾಧ್ಯಕ್ಷರಾದ ರಮಾದೇವಿ ರಾಮಚಂದ್ರ ಭಟ್ಟ ಹಾಗೂ ದೇಗುಲದ ಧರ್ಮದರ್ಶಿಗಳಾದ ಹೆಚ್. ಬಾಲಚಂದ್ರ ಭಟ್ಟ ವಿನಂತಿಸಿದ್ದಾರೆ
13-03-2024 ರಂದು ಜಗದ್ಗುರು ವಿಧುಶೇಖರ ಭಾರತೀ ಮಹಾ ಸ್ವಾಮಿಗಳು ಆಗಮಿಸಿ ನೂತನ ದೇವಾಲಯದ ಲೋಕಾರ್ಪಣೆ, ಶಿಖರ ಕಲಶ ಸ್ಥಾಪನೆ, ಅಭಿಷೇಕ ನೆರವೇರಿಸಿ ಆಶೀರ್ವದಿಸಲಿದ್ದಾರೆ. ಸಂಜೆ 5 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಿ. ವೀರೇಂದ್ರ ಹೆಗ್ಗಡೆಯವರು ಆಗಮಿಸಿ ಶ್ರೀ ದೇವರಿಗೆ ಬೆಳ್ಳಿರಥ ಸಮರ್ಪಿಸಲಿದ್ದಾರೆ
14-03-2024 ರಂದು ಲಕ್ಷಮೋದಕ ಹವನ ಮುಂದುವರಿಯಲಿದ್ದು, ಶ್ರೀ ಸೋಂದಾ ಸ್ವರ್ಣವಲ್ಲಿ ಮಠಾಧೀಶ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ಆಶೀರ್ವಚನ ನಡೆಯಲಿದೆ. ಸಂಜೆ 6ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಬ್ರಹ್ಮಕಲಶೋತ್ಸವ ಶುಭ ಸಂದರ್ಭದಲ್ಲಿ ಶ್ರೀ ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಉಪಸ್ಥಿತರಿರುತ್ತಾರೆ.
15-03-2024 ರಂದು ಲಕ್ಷಮೋದಕ ಹವನದ ಪೂರ್ಣಾಹುತಿ ನಡೆಯಲಿದ್ದು, ಸಂಜೆ ಧಾರ್ಮಿಕ ಸಭೆಯಲ್ಲಿ ಸಾಂದೀಪನಿ ಕೇಮಾರು ಮಠಾಧೀಶರಾದ ಶ್ರೀ ಈಶ ವಿಠಲದಾಸ ಸ್ವಾಮೀಜಿಗಳು ಆಶೀರ್ವಚನ ಮಾಡುವರು.
16-03-2024 do ಶತಚಂಡಿಯಾಗ ಪೂರ್ಣಾಹುತಿ ನಡೆಯಲಿದ್ದು, ಶ್ರೀ ಬಾಳೆಕುದ್ರು ಮಠಾಧೀಶ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರು, ಹೊರನಾಡು ಕ್ಷೇತ್ರದ ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಯಿಸರು ಉಪಸ್ಥಿತರಿರುತ್ತಾರೆ, ಸಂಜೆ ಧಾರ್ಮಿಕ ಸಭೆಯಲ್ಲಿ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಗಳು ಆಶೀರ್ವಚನ ಮಾಡಲಿದ್ದಾರೆ.
17-03-2024 ರಂದು 2016 ತೆಂಗಿನಕಾಯಿ ಗಣಹೋಮ ನಡೆಯಲಿದ್ದು, ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಚಿತೈಸಿ ರಜತ ಕಲಶಾಭಿಷೇಕ, ಪ್ರಧಾನ ಕಲಶಾಭಿಷೇಕ ಮತ್ತು ಕನಕಾಭಿಷೇಕ ಗಣಹವನದ ಪೂರ್ಣಾಹುತಿಯಲ್ಲಿ ಉಪಸ್ಥಿತರಿದ್ದು ಆಶೀರ್ವಚನ ಮಾಡಲಿದ್ದಾರೆ. ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಆನೆಗುಂದಿ ಮಹಾ ಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿ, ಗಾಣಗಾಪುರ ಶ್ರೀ ಗುರುದೇವತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ಮಾಡಲಿರುವರು. ಪ್ರತೀ ದಿನ ಧಾರ್ಮಿಕ ಸಭೆಯಲ್ಲಿ ಹಲವರು ಗಣ್ಯ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ. ಪ್ರತೀ ದಿನ ರಾತ್ರಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸಲಾಗಿದೆ.