Home » ಆರೋಗ್ಯ ಮಾಹಿತಿ ಕಾರ್ಯಕ್ರಮ
 

ಆರೋಗ್ಯ ಮಾಹಿತಿ ಕಾರ್ಯಕ್ರಮ

by Kundapur Xpress
Spread the love

ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಬ್ರಹ್ಮಾವರ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಪಾಂಡೇಶ್ವರ ವಲಯದ ಸಾಸ್ತಾನ ಕಾರ್ಯಕ್ಷೇತ್ರದ ವಿಕಾಸ ಜ್ಞಾನವಿಕಾಸ ಕೇಂದ್ರದಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಮಾಹಿತಿ ಕಾರ್ಯಕ್ರಮದಡಿಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ ಭಾನುವಾರ ಪಾಂಡೇಶ್ವರ ಯಡಬೆಟ್ಟು ಜರಗಿತು.
ಈ ಸಂದರ್ಭದಲ್ಲಿ ಉಡುಪಿ ಉದ್ಯಾವರದ ಆಯುರ್ವೇದಿಕ್ ಆಸ್ಪತ್ರೆಯ ಡಾ. ಸಹನರವರು ಗುದ ದ್ವಾರದ ಸಮಸ್ಯೆ ,ಹಾಗೂ ಅದಕ್ಕೆ ಸಂಬಂಧಿಸಿದ ರೋಗಗಳ ಬಗ್ಗೆ ಹಾಗೂ ತಡೆಗಟ್ಟುವ ಬಗ್ಗೆ ಮತ್ತು ಮನೆಮದ್ದುಗಳ ಬಗ್ಗೆ, ನಮ್ಮ ದಿನನಿತ್ಯದ ಆಹಾರದ ಕ್ರಮಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.
ಮಾಹಿತಿ ಕಾರ್ಯಕ್ರಮವನ್ನು ಶ್ರೀ.ಕ್ಷೇ.ಧ.ಗ್ರಾ.ಯೋ ತಾಲೂಕಿನ ಯೋಜನಾಧಿಕಾರಿ ರಮೇಶ್ ಪಿ.ಕೆ ಉದ್ಘಾಟಿಸಿದರು. ಯಡಬೆಟ್ಟು ಸೇವಾ ಪ್ರತಿನಿಧಿ ಜ್ಯೋತಿ,ಐರೋಡಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಚಂದ್ರಕಲಾ,ಯಕ್ಷಿಮಠದ ಸೇವಾಪ್ರತಿನಿಧಿ ವೀಣಾ ಪೈ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ತಾಲೂಕಿನ ಸಮನ್ವಯ ಅಧಿಕಾರಿ ಪುಷ್ಪಲತಾ ನಿರೂಪಿಸಿದರು. ಪಾಂಡೇಶ್ವರ ವಲಯದ ಮೇಲ್ವಿಚಾರಕರಾದ ಜಯಲಕ್ಷ್ಮಿ ಸ್ವಾಗತಿಸಿದರು. ಸಾಸ್ತಾನ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಶೋಭಾ ವಂದಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಪಾಂಡೇಶ್ವರ ವಲಯದ ಸಾಸ್ತಾನ ಕಾರ್ಯಕ್ಷೇತ್ರದ ವಿಕಾಸ ಜ್ಞಾನವಿಕಾಸ ಕೇಂದ್ರದಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಮಾಹಿತಿ ಕಾರ್ಯಕ್ರಮದಡಿಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಶ್ರೀ.ಕ್ಷೇ.ಧ.ಗ್ರಾ.ಯೋ ತಾಲೂಕಿನ ಯೋಜನಾಧಿಕಾರಿ ರಮೇಶ್ ಪಿ.ಕೆ ಉದ್ಘಾಟಿಸಿದರು. ಉಡುಪಿ ಉದ್ಯಾವರದ ಆಯುರ್ವೇದಿಕ್ ಆಸ್ಪತ್ರೆಯ ಡಾ. ಸಹನ, ತಾಲೂಕಿನ ಸಮನ್ವಯ ಅಧಿಕಾರಿ ಪುಷ್ಪಲತಾ ಇದ್ದರು.

   

Related Articles

error: Content is protected !!