ಕುಂದಾಪುರ :”ತಡಮಾಡಬೇಡಿ, ಈ ಕೂಡಲೇ ಮಾಡಿಸಿಕೊಳ್ಳಿರಿ. ತಡ ಮಾಡಿದ್ರೆ ಎಷ್ಟು ದುಡ್ಡು ಕೊಟ್ಟರೂ ಪಾಲಿಸಿ ಸಿಗಲಿಕ್ಕಿಲ್ಲ.ಸಿಕ್ಕಿದರೂ ತಕ್ಷಣ ಚಿಕಿತ್ಸೆಗೆ ಸಹಾಯವಾಗಲಿಕ್ಕಿಲ್ಲ” !
ಹಣ ಎಷ್ಟು ಬೇಕಾದರೂ ಕೊಡ್ತೀವಿ, ಒಂದು ಹೆಲ್ತ್ ಕಾರ್ಡ್ ಮಾಡಿಕೊಡಿ ಅಂತ ಬಂದವರ ಅರ್ಜಿ ತಿರಸ್ಕಾರಗೊಂಡಾಗ ಅವರು ಪಡುವ ಸಂಕಟ ಅಷ್ಟಿಷ್ಟಲ್ಲ. ಪ್ರತಿನಿತ್ಯ ನನ್ನಲ್ಲಿ ಬರುವ 20 – 30 ಮಂದಿಯಲ್ಲಿ ಅರ್ಧದಷ್ಟು ಜನರಿಗೆ ಪಾಲಿಸಿಕೊಡೋಕೆ ಆಗಲ್ಲ. ಕಾರಣ ಅವರಿಗೆ ಈ ಕೂಡಲೇ ಚಿಕಿತ್ಸೆ ಬೇಕಾಗಿದೆ. ಅವರ ಕಿಡ್ನಿ, ಹಾರ್ಟ್, ಲಿವರ್, ಬ್ರೇನ್, ಗರ್ಭಕೋಶ ಮುಂತಾದ ದೇಹದ ಅಮೂಲ್ಯ ಅಂಗ ವೈಫಲ್ಯಕ್ಕೊಳಗಾಗಿದೆ. ವೈದ್ಯರು ಚಿಕಿತ್ಸೆಗೆ ಲಕ್ಷಾಂತರ ಹಣ ಬೇಕು, ಹೆಲ್ತ್ ಕಾರ್ಡ್ ಇದೆಯಾ? ಅಂದಾಗಲೇ ಜನರಿಗೆ ಹೆಲ್ತ್ ಕಾರ್ಡ್ ನ ನೆನಪಾಗುವುದು. ಇಂತಹ ಪರಿಸ್ಥಿತಿಯಲ್ಲಿ ಓಡೋಡಿ ಬಂದ ಜನರಿಗೆ ಪಾಲಿಸಿ ಸಿಗುವುದೇ ಡೌಟ್ !
“ಹೆಲ್ತ್ ಇನ್ಸೂರೆನ್ಸ್ ಆರೋಗ್ಯವಂತರಿಗಾಗಿ”, “ರೋಗಿಗಳಿಗಾಗಿ ಅಲ್ಲ”
“ನನಗೇನು ಕಾಯಿಲೆ ಇಲ್ಲ ,ನಾನು ಚೆನ್ನಾಗಿದ್ದೇನೆ, ನನಗೇಕೆ ಹೆಲ್ತ್ ಕಾರ್ಡ್?, ಸುಮ್ಮನೆ ದುಡ್ಡು ದಂಡ, ಮುಂದೆ ಸಮಸ್ಯೆ ಬಂದಾಗ ಮಾಡಿಸಿದರಾಯಿತು” ಎನ್ನೋದು ಇಂದಿನ ಜನರ ಮನಸ್ಥಿತಿ. ನಮಗೆ ಯಾವ ಹಬ್ಬ ಯಾವಾಗ ಬರುತ್ತೆ ಅನ್ನೋದು ಗೊತ್ತಿರುತ್ತೆ. ಆದರೆ, ಯಾವಾಗ ನಾವು ಕಾಯಿಲೆಗೆ ತುತ್ತಾಗುತ್ತೇವೋ, ಅಪಘಾತಕ್ಕೆ ಈಡಾಗುತ್ತೇವೋ, ಆಪರೇಷನ್ ಗೆ ಒಳಗಾಗುತ್ತೇವೋ ಅಂತ ಯಾವ ಜ್ಯೋತಿಷಿಯೂ ಮುಂದಾಗಿ ತಿಳಿಸಲ್ಲ.
ಹಣ ಕೊಟ್ಟರೆ ಯಾರಿಗೆ ಬೇಕಾದರೂ, ಯಾವಾಗ ಬೇಕಾದರೂ, ಯಾವ ಕಾಯಿಲೆಗೆ ಬೇಕಾದ್ರೂ , ಪಾಲಿಸಿ ಸಿಗುತ್ತೆ ಅನ್ನೋದು ಇಂದಿನ ಜನರ ಕಲ್ಪನೆ. ಆದರೆ ಈ ಬಗ್ಗೆ ಕಂಪೆನಿ ರೂಪಿಸಿರೋ ನಿಯಮದ ಬಗ್ಗೆ ಪಾಲಿಸಿದಾರನಿಗೆ ಬಿಡಿ, ಪಾಲಿಸಿ ಮಾಡಿಸಿಕೊಡೋ ಎಷ್ಟೋ ಏಜೆಂಟರಿಗೂ ಈ ಬಗ್ಗೆ ಸ್ಪಷ್ಟ ತಿಳುವಳಿಕೆ ಇಲ್ಲ. ಪಾಲಿಸಿಕೊಳ್ಳುವ ಮೊದಲು ಪ್ರತಿಯೊಬ್ಬರೂ ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದರೆ, ಕ್ಲೈಮ್ ವಿಷಯದಲ್ಲಿ ವಿವಾದ ತಪ್ಪುತ್ತದೆ. ನಾವು ಪಾಲಿಸಿ ಪಡೆದಿದ್ದೇವೆ, ಕಂಪೆನಿ ಎಲ್ಲಾ ಚಿಕಿತ್ಸೆಗೂ, ಸಂಪೂರ್ಣ ವೆಚ್ಚ ನೀಡಬೇಕೆಂದು ವಾದಿಸೋರೆ ಹೆಚ್ಚು.
ಸಂಪರ್ಕಿಸಿ ನಂದಾ ,ಕುಂದಾಪುರ – 9242401083