Home » ಬೋರ್ಡ್ ಪರೀಕ್ಷೆ ರದ್ದು : ಹೈಕೋರ್ಟ್
 

ಬೋರ್ಡ್ ಪರೀಕ್ಷೆ ರದ್ದು : ಹೈಕೋರ್ಟ್

by Kundapur Xpress
Spread the love

ಬೆಂಗಳೂರು : 5,8,9,1 1 ನೇ ತರಗತಿ ಮಕ್ಕಳಿಗೆ ರಾಜ್ಯಮಟ್ಟದ ಬೋರ್ಡ್ ಪರೀಕ್ಷೆ ನಡೆಸುವ ಸರ್ಕಾರದ ಸುತ್ತೋಲೆಯನ್ನು ಹೈಕೋರ್ಟ್ ರದ್ದುಪಡಿಸಿದೆ. ಈ ಆದೇಶದ ಬೆನ್ನಲ್ಲೇ ಏಕಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಇದು ವಿದ್ಯಾರ್ಥಿಗಳಲ್ಲಿ ಈ ವರ್ಷ ಬೋರ್ಡ್ ಎಕ್ಸಾಮೋ? ಶಾಲಾ ಪರೀಕ್ಷೆಯೋ ಎಂಬ ಗೊಂದಲ ಹುಟ್ಟುಹಾಕಿದ್ದರೆ, ಶಾಲಾ ಪರೀಕ್ಷೆಗಳೇ ನಡೆಯುವುದಾದಲ್ಲಿ ಪರೀಕ್ಷೆಗೆ ಕೇವಲ 4 ದಿನಗಳಿರುವಾಗ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಸಂಘಟನಾತ್ಮಕ ಒತ್ತಡಕ್ಕೆ ಶಾಲೆಗಳನ್ನು ಸಿಲುಕಿಸಿದೆ.

ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು, ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ನ್ಯಾಯಪೀಠ ಬುಧವಾರ ಪ್ರಕಟಿಸಿದೆ. ರಾಜ್ಯ ಪಠ್ಯಕ್ರಮಗಳ ಶಾಲೆಗಳಲ್ಲಿ ಐದು, ಎಂಟು, ಒಂಭತ್ತು ಮತ್ತು 11ನೇ ತರಗತಿ ಮಕ್ಕಳಿಗೆ ರಾಜ್ಯಮಟ್ಟದ ಮೌಲ್ಯಾಂಕನ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ 2023ರ ಅ.6 ಮತ್ತು 9 ರಂದು ಎರಡು ಸುತ್ತೋಲೆ ಹೊರಡಿಸಿತ್ತು.

   

Related Articles

error: Content is protected !!