ಕುಂದಾಪುರ : ಉಡುಪಿ ಜಿಲ್ಲೆಯಾದ್ಯಂತ ಸಪ್ಟೆಂಬರ್ 19ರಂದು ಸರ್ಕಾರಿ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಯವರು ಆದೇಶ ಮಾಡಿದ್ದಾರೆ
ಮೊದಲು ಸಪ್ಟಂಬರ್ 18 ರಂದು ಗಣೇಶ ಚತುರ್ಥಿಗಾಗಿ ಸರಕಾರಿ ರಜೆ ಘೋಷಣೆ ಮಾಡಲಾಗಿತ್ತು ಆದರೆ ಉಡುಪಿ ಜಿಲ್ಲಾದ್ಯಂತ ಸಪ್ಟೆಂಬರ್ 19 ರಂದು ಗಣೇಶ ಚತುರ್ಥಿ ಆಚರಣೆ ಇರುವುದರಿಂದ ಅಂದೇ ರಜೆ ನೀಡಬೇಕಾಗಿ ಸರಕಾರದ ಮೇಲೆ ಒತ್ತಡ ಹೇರಲಾಗಿತ್ತು ಸರಕಾರವು ಗಣೇಶ ಚತುರ್ಥಿಯ ರಜೆ ಘೋಷಣೆಯ ವಿಚಾರವನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿತ್ತು ಹಾಗಾಗಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ವಿದ್ಯಾ ಕುಮಾರಿಯವರು ಸಪ್ಟೆಂಬರ್ 19 ರಂದು ರಜೆ ಘೋಷಣೆ ಮಾಡಿದ್ದಾರೆ