ಥಿಂಪು: ಎರಡು ದಿನಗಳ ಭೂತಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಶನಿವಾರ ರಾಜಧಾನಿ ಥಿಂಪುವಿನಲ್ಲಿ ಗ್ಯಾಲ್ಸುಯೆನ್ ಚೆಟ್ಸನ್ ಪೆಮಾ ವಾಂಗ್ಲುಕ್ ಮಹಿಳಾ ಮತ್ತ ಮಕ್ಕಳ ಅತ್ಯಾಧುನಿಕ ಆಸ್ಪತ್ರೆಯನ್ನು ಉದ್ಘಾಟಿಸಿದರು. ಈ ಆಸ್ಪತ್ರೆಯನ್ನು ಭಾರತದ ಆರ್ಥಿಕ ಸಹಕಾರದೊಂದಿಗೆ ನಿರ್ಮಿಸಲಾಗಿದೆ. ಇದೇ ವೇಳೆ ಮುಂದಿನ 5 ವರ್ಷಗಳಲ್ಲಿ ಭಾರತದ ವತಿಯಿಂದ ಭೂತಾನ್ ಅಭಿವೃದ್ಧಿಗೆ 10ಸಾವಿರ ಕೋಟಿ ರು. ಸಹಾಯಧನ ನೀಡುವುದಾಗಿ ಮೋದಿ ಪ್ರಕಟಿಸಿದರು.