Home » ಹಾಸ್ಟೇಲ್‌ ಜೀವನ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪ
 

ಹಾಸ್ಟೇಲ್‌ ಜೀವನ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪ

ಎಂ. ಮಹೇಶ್‌ ಹೆಗ್ಡೆ ಮೊಳಹಳ್ಳಿ

by Kundapur Xpress
Spread the love

ಕುಂದಾಪುರ : ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಹಾಸ್ಟೇಲ್‌ ಬಹಳ ಪ್ರಾಮುಖ್ಯ ಪಾತ್ರವನ್ನು ವಹಿಸುತ್ತದೆ, ಹಾಸ್ಟೇಲ್‌ ಜೀವನ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗುತ್ತದೆ ಎಂದು ಇಲ್ಲಿನ ಎಂ.ಎಂ. ಹೆಗ್ಡೆ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಎಂ. ಮಹೇಶ್‌ ಹೆಗ್ಡೆ ನುಡಿದರು
ಅವರು ಗುರುವಾರ ಇಲ್ಲಿನ ಎಕ್ಸಲೆಂಟ್‌ ಪಿಯು ಕಾಲೇಜು ಮತ್ತು ಹೈಸ್ಕೂಲಿನಲ್ಲಿ ಹಾಸ್ಟೇಲ್‌ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು

ದೂರದೂರುಗಳಿಂದ ಬಂದಿರುವ ನೂರಾರು ವಿದ್ಯಾರ್ಥಿಗಳು ಒಂದೆಡೆ ವಾಸಿಸುವ ಹಾಸ್ಟೇಲುಗಳು ಅವರು ಸಮಾಜದಲ್ಲಿ ಎಲ್ಲರೊಂದಿಗೆ ಬೆರತು ಹೊಂದಾಣಿಕೆಯಿಂದ ಬದುಕುವುದನ್ನು ಕಲಿಸುತ್ತದೆ ಎಂದ ಅವರು 12 ವರ್ಷಗಳ ಹಿಂದೆ ತಾವು ಈ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದಾಗ, ದೂರದೂರಿನಿಂದ ಬರುತ್ತಿದ್ದ 3 ವಿದ್ಯಾರ್ಥಿಗಳಿಗೆ ತಮ್ಮ ಮನೆಯಲ್ಲಿ ಹಾಸ್ಟೇಲಿನಂತೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿ, ಅವರು ತಮ್ಮ ಮಕ್ಕಳಂತೆ ವರ್ತಿಸಿ, ಉತ್ತಮ ಅಂಕಗಳನ್ನು ಗಳಿಸಿ, ಇಂದು ಸಮಾಜದಲ್ಲಿ ಉತ್ತಮ ನಾಗರಿಕರಾಗಿದ್ದನ್ನು ಸ್ಮರಿಸಿಕೊಂಡರು

ಕಾಲೇಜಿನ ಕಾಮರ್ಸ್‌ ವಿಬಾಗದ ಮುಖ್ಯಸ್ಥ ಶ್ರೀನಿವಾಸ ವೈದ್ಯ ಅವರು ಮಾತನಾಡುತ್ತಾ, ಶಿಕ್ಷಣವು ಯೋಗ್ಯತೆ ಹಾಗೂ ಯೋಗ್ಯತೆಯು ಸಂಪತ್ತನ್ನು ನೀಡುತ್ತದೆ. ಶೈಕ್ಷಣಿಕ ಜೀವನದಲ್ಲಿ ಹಾಸ್ಟೇಲು ಶಿಸ್ತು ಸಂಯಮ ಮತ್ತು ಜೀವನ ಪಾಠವನ್ನು ಕಲಿಸುತ್ತದೆ. ಹಾಸ್ಟೇಲು ಜೀವನ ಮೌಲ್ಯಗಳನ್ನು ಕಲಿಸುವ ಗರಡಿಮನೆಯಾಗಿದೆ ಎಂದರು.
ಹಾಸ್ಟೇಲ್‌ ದಿನಾಚರಣೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಿಮಿಕ್ರಿ ಗೋಪಿ ಆಗಮಿಸಿದ್ದರು ಮುಖ್ಯೋಪಾಧ್ಯಾಯಿನಿ ಸರೋಜಿನಿ ಪಿ. ಆಚಾರ್ಯ ಪ್ರಾಸ್ತಾವಿಕ ಮಾತನಾಡಿ ಉತ್ತಮವಾದ ಹಾಸ್ಟೇಲ್‌ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಿದ ವಾರ್ಡನ್‌ಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ವೇದಿಕೆಯಲ್ಲಿ ನಾಗರಾಜ್‌ ಶೆಟ್ಟಿ ಹಾಗೂ ಸಂದೇಶ್‌ ಉಪಸ್ಥಿತರಿದ್ದರು

ಶ್ರದ್ದಾ ಹಾಗೂ ಕಾವ್ಯ ನಿರೂಪಿಸಿದ ಕಾರ್ಯಕ್ರಮದಲ್ಲಿ ಬಯೋಲಜಿ ಉಪನ್ಯಾಸಕಿ ಶ್ರಾವ್ಯ ಧನ್ಯವಾದವಿತ್ತರು
ಮಿಮಿಕ್ಕಿ ಗೋಪಿ ವಿದ್ಯಾರ್ಥಿಗಳಿಗೆ ಜೀವನ ಮೌಲ್ಯವನ್ನು ತಿಳಿಸುತ್ತಾ ವಿವಿಧ ವ್ಯಕ್ತಿಗಳ ಸಂಭಾಷಣೆಯನ್ನು ಅನುಕರಿಸುವ ಮೂಲಕ ವಿದ್ಯಾಥಿಗಳನ್ನು ನಗೆಗಡಲಲ್ಲಿ ತೇಲಿಸಿದರು ಕೊನೆಯಲ್ಲಿ ಹಾಸ್ಟೇಲ್‌ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿತು

 

Related Articles

error: Content is protected !!