Home » ಮೂಡ್ಲಕಟ್ಟೆ : ಶೈಕ್ಷಣಿಕ ಮತ್ತು ವ್ಯಕ್ತಿತ್ವ ವಿಕಸನ ಶಿಬಿರ
 

ಮೂಡ್ಲಕಟ್ಟೆ : ಶೈಕ್ಷಣಿಕ ಮತ್ತು ವ್ಯಕ್ತಿತ್ವ ವಿಕಸನ ಶಿಬಿರ

by Kundapur Xpress
Spread the love

ಮೂಡ್ಲಕಟ್ಟೆ : ಐ ಎಂ ಜೆ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಮತ್ತು ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ ನಲ್ಲಿ ಒಂದು ದಿನದ ಶೈಕ್ಷಣಿಕ ಮತ್ತು ವ್ಯಕ್ತಿತ್ವ ವಿಕಸನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಡೀನ್ ರಾದ ಡಾ. ಪದ್ಮಚರಣ ಸ್ವೈನ್ ರವರು ಕಾರ್ಯಾಗಾರದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ವೇದಿಕೆಯಲ್ಲಿ ಐ ಎಂ ಜೆ ಇನ್ಸ್ಟಿಟ್ಯೂಷನ್ಸ್ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗ್ಡೆ, ಉಪ ಪ್ರಾಂಶುಪಾಲರಾದ ಪ್ರೊ. ಸೌಜನ್ಯ, ಆಡಳಿತಾಧಿಕಾರಿಯಾದ ಶ್ರೀ ಪಾರ್ಥಸಾರಥಿಯವರು ಇದ್ದರು. ಕಾರ್ಯಕ್ರಮವು ವಿದ್ಯಾರ್ಥಿನಿ ಮಿಸ್ಬಾ ಕೌಸರ್ ರವರ ಸ್ವಾಗತದಿಂದ ಪ್ರಾರಂಭವಾಯಿತು. ಮುಜ್ಞಾನವರು ವಂದನಾರ್ಪಣೆಗೈದರು. ಕುಮಾರಿ ಸಿಂಧು ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.

ಸಭಾಕಾರ್ಯ ಕ್ರಮದ ನಂತರ ಡಾ. ರಾಮಕೃಷ್ಣ ಹೆಗಡೆಯವರು ಅತ್ಯಂತ ಕ್ರಿಯಾಶೀಲವಾಗಿ ಯಶಸ್ವೀ ಕಾರ್ಯಗಾರವನ್ನು ನಡೆಸಿಕೊಟ್ಟರು. ಬಹಳ ಚಟುವಟಿಕೆಯಿಂದ ಕೂಡಿದ ಈ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳು ತುಂಬಾ ಆಸಕ್ತಿ ಯಿಂದ ಭಾಗವಹಿಸಿದ್ದರು. ಪ್ರೊ. ಸುಷ್ಮಾ ಉಪಾಧ್ಯಯ ಮತ್ತು ಪ್ರೊ. ಪವಿತ್ರಾರವರು ಈ ಕಾರ್ಯಕ್ರಮ ಸಂಯೋಜಿಸಿದ್ದರು.

 

Related Articles

error: Content is protected !!