ಕುಂದಾಪುರ : ದೇಶದ ಪ್ರಗತಿಗೆ ಮತ್ತು ಸ್ಪರ್ಧಾತ್ಮಕ ಜಗತ್ತಿಗೆ ಯುವ ನಾಯಕರನ್ನು ರೂಪಿಸುವ ನಿಟ್ಟಿನಲ್ಲಿ ಮತ್ತು ಯುವನಾಯಕತ್ವದ ಮಹತ್ವ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ಕಾಲೇಜು ಐ . ಎಮ್. ಜೆ. ಐ ಸ್. ಸಿ ಯಂಗ್ ಲೀಡರ್ ಅವಾರ್ಡ್ 2024 ಎಂಬ ಸ್ಪರ್ಧೆಯನ್ನು ಹಮ್ಮಿಕೊಂಡಿರುತ್ತದೆ. ಈ ಸ್ಪರ್ಧೆಯ ಮೂಲ ಉದ್ದೇಶ ಯುವ ನಾಯಕತ್ವವನ್ನು ಉತ್ತೇಜಿಸುವುದು ಮತ್ತು ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು. ಒಬ್ಬ ವಿದ್ಯಾರ್ಥಿ ಯುವ ನಾಯಕನಾಗಿ ರೂಪುಗೊಳ್ಳಬೇಕಾದರೆ ಅವನಿಗೆ ಇರಬೇಕಾದ ಅರ್ಹತೆ ಮತ್ತು ತಯಾರಿ ಹೇಗಿರಬೇಕು ಮತ್ತು ಸಂವಹನ ಕಲೆಯು ವಿದ್ಯಾರ್ಥಿ ಜೀವನದಲ್ಲಿ ಹೇಗೆ ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದು ಸ್ಪರ್ಧೆ ಆಯೋಜನೆಯ ಪರಿಕಲ್ಪನೆ.
ಸ್ಪರ್ಧೆಯ ವಿವಿಧ ಹಂತಗಳ ವಿವರ
ಈ ಸ್ಪರ್ಧೆಯನ್ನು ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಆಯ್ದ ಪಿ.ಯು ಸಿ. ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದು ಸ್ಪರ್ಧೆಯಲ್ಲಿ ಸರಿ ಸುಮಾರು ೨೦ ಕ್ಕೂ ಹೆಚ್ಚಿನ ಕಾಲೇಜಿನ ೨೦೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡಿರುತ್ತಾರೆ. ಸ್ಪರ್ಧೆಯು ಎರಡು ಹಂತದಲ್ಲಿ ನೆಡೆಯುತ್ತಿದ್ದು ಮೊದಲನೆಯ ಹಂತವು ಆಯಾ ಕಾಲೇಜಿನಲ್ಲೇ ನೆಡೆದಿರುತ್ತದೆ ಮತ್ತು ಈ ಹಂತವು ಈಗಾಗಲೇ ಮುಕ್ತಯಗೊಂಡಿರುತ್ತದೆ . ಮೊದಲನೆಯ ಹಂತವು ಜಸ್ಟ್ ಆಮಿನಿಟ್ ಎನ್ನುವ ಸ್ಪರ್ಧೆಯಾಗಿದ್ದು ಸ್ಪರ್ದಿಸುವ ವಿದ್ಯಾರ್ಥಿಯು ತಾನು ಆಯ್ಕೆ ಮಾಡಿದ ವಿಷಯದ ಕುರಿತು ಒಂದು ಅಥವಾ ಎರಡು ನಿಮಿಷದಲ್ಲಿ ಮಾತನಾಡಬೇಕು. ಈ ಹಂತದಲ್ಲಿ ವಿದ್ಯಾರ್ಥಿಯ ಸಂವಹನ ಕಲೆ, ವಿಷಯದ ನೈಪುಣ್ಯತೆ ಹಾಗು ಸ್ಪಷ್ಟತೆ ಆದರದ ಮೇಲೆ ಅಗ್ರ ಮೂರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಮೊದಲ ಹಂತದಲ್ಲಿ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರವನ್ನು ಆಯಾ ಕಾಲೇಜಿನಲ್ಲೇ ನೀಡಲಾಯಿತು ಮತ್ತು ಆಯ್ಕೆಗೊಂಡ ಈ ವಿದ್ಯಾರ್ಥಿಗಳು ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸುವರು. ಮೊದಲ ಹಂತದಲ್ಲಿ ಸ್ಪರ್ದಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಈಗಾಗಲೇ ೨೦ ಕಾಲೇಜಿನ ೬೦ ವಿದ್ಯಾರ್ಥಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದು ಜನವರಿ ೧೨ ರಂದು ಮೂಡ್ಲಕಟ್ಟೆ ಕ್ಯಾಂಪಸ್ ನಲ್ಲಿ ನೆಡೆಯುವ ಅಂತಿಮ ಹಂತದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ
ಅಂತಿಮ ಸ್ಪರ್ಧೆ (ರಾಷ್ಟ್ರೀಯ ಯುವ ದಿನಾಚರಣೆಯ ಸಂದರ್ಭ)
ಐ . ಎಮ್. ಜೆ. ಐ. ಎಸ್. ಸಿ ಯಂಗ್ ಲೀಡರ್ ಅವಾರ್ಡ್ ೨೦೨೪ ಇದರ ಅಂತಿಮ ಸ್ಪರ್ಧೆಯನ್ನು ಶ್ರೀ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ಆಚರಿಸುವ ರಾಷ್ಟ್ರೀಯ ಯುವ ದಿನವಾದ ಜನವರಿ ೧೨ ರಂದು ಮೂಡ್ಲಕಟ್ಟೆ ಕ್ಯಾಂಪಸ್ ನಲ್ಲಿ ಹಮ್ಮಿಕೊಂಡಿದ್ದು, ಸ್ಪರ್ಧೆಗಾಗಿ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಸ್ಪರ್ಧೆಯಲ್ಲಿ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಆಯ್ಕೆಗೊಂಡ ಪ್ರತಿಷ್ಠಿತ ಪಿ.ಯು ಸಿ. ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು ಸ್ಪರ್ಧೆ ರೋಚಕವಾಗಿ ಮೂಡಿಬರಲಿದೆ. ಅಂತಿಮ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗೆ ಐ . ಎಮ್. ಜೆ. ಐ ಸ್. ಸಿ ಯಂಗ್ ಲೀಡರ್ ಅವಾರ್ಡ್ ೨೦೨೪ ನೀಡಿತ್ತಿದ್ದು ವಿಜೇತ ವಿದ್ಯಾರ್ಥಿ ಆಕರ್ಷಕ ಟ್ರೋಪಿ ಜೊತೆಯಲ್ಲಿ ನಗದು ಬಹುಮಾನ ರೂಪಾಯಿ 5000 ಮತ್ತು ಪ್ರಮಾಣ ಪತ್ರ ಸ್ವೀಕರಿಸಲಿದ್ದಾರೆ. ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿ ನಗದು ಬಹುಮಾನ ರೂಪಾಯಿ 2000 ಮತ್ತು ಪ್ರಮಾಣ ಪತ್ರ ಪಡೆಯಲಿದ್ದಾರೆ.
ಅತಿಥಿಗಳ ವಿವರ.
ಜನವರಿ 12 ರಂದು ನಡೆಯುವ ಅಂತಿಮ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಲಯನ್ಸ್ ಕ್ಲಬ್ ನ ಮಾಜಿ ಡಿಸ್ಟ್ರಿಕ್ಟ್ ಗವರ್ನರ್ ಹಾಗು ಅಂತಾರಾಷ್ಟ್ರೀಯ ಮೋಟಿವೇಶನಲ್ ಸ್ಪೀಕರ್ ಆಗಿರುವ ಲಯನ್ ನೀಲಕಂಠ ಎಮ್ ಹೆಗ್ಡೆ ಅವರು ಉದ್ಘಾಟಿಸಲಿದ್ದಾರೆ. ಸಭಾಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲೇಯಾದ ಡಾ|| ಪ್ರತಿಭಾ ಪಟೇಲ್ ಎಮ್ ಮತ್ತು ಸಂಸ್ಥೆಯ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ|| ರಾಮಕೃಷ್ಣ ಹೆಗ್ಡೆ ಮತ್ತು ಉಪಪ್ರಾಂಶುಪಾಲಾರದ ಪ್ರೊಫೆಸರ್ ಜಯಶೀಲ ಕುಮಾರ್ ಉಪಸ್ಥಿತರಿರುವರು.
ಸಮಾರೋಪ ಸಮಾರಂಭದಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ನಾರಾಯಣ ಶೆಟ್ಟಿ ಅವರು ಭಾಗವಹಿಸಲಿದ್ದು ಸಭೆಯ ಅಧ್ಯಕ್ಷತೆಯನ್ನು ಐ. ಎಮ್. ಜೆ. ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಶ್ರೀಯುತ ಸಿದ್ಧಾರ್ಥ ಜೆ ಶೆಟ್ಟಿಯವರು ವಹಿಸಲಿದ್ದಾರೆ. ಸಮಾರಂಭದಲ್ಲಿ ಸಂಸ್ಥೆಯ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ|| ರಾಮಕೃಷ್ಣ ಹೆಗ್ಡೆ, ಪ್ರಾಂಶುಪಾಲೇಯಾದ ಡಾ|| ಪ್ರತಿಭಾ ಪಟೇಲ್ ಎಮ್ ಮತ್ತು ಉಪಪ್ರಾಂಶುಪಾಲಾರದ ಪ್ರೊಫೆಸರ್ ಜಯಶೀಲ ಕುಮಾರ್ ಉಪಸ್ಥಿತರಿರುವರು.