Home » ಟ್ರಾಫಿಕ್, ಡ್ರಗ್ಸ್ ಮತ್ತು ಪೋಕ್ಸೋ ಕಾಯಿದೆಯ ಕುರಿತು ಜಾಗೃತಿ
 

ಟ್ರಾಫಿಕ್, ಡ್ರಗ್ಸ್ ಮತ್ತು ಪೋಕ್ಸೋ ಕಾಯಿದೆಯ ಕುರಿತು ಜಾಗೃತಿ

by Kundapur Xpress
Spread the love

ಮೂಡ್ಲಕಟ್ಟೆ : ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ನಡೆದ ಏಳನೇ ದಿನದ ದೀಕ್ಷಾರಂಭ ಕಾರ್ಯಕ್ರಮದಲ್ಲಿ ‘ಕಮ್ಯುನಿಟಿ ಸರ್ವಿಸ್ ಕ್ಲಬ್’ ಸಹಯೋಗದಲ್ಲಿ “ಟ್ರಾಫಿಕ್, ಡ್ರಗ್ಸ್ ಮತ್ತು ಪೋಕ್ಸೋ ಕಾಯಿದೆಯ ಕುರಿತು ಜಾಗೃತಿ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಕುಂದಾಪುರ ಗ್ರಾಮಾಂತರ ಆರಕ್ಷಕ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಆದ ಶಂಕರ್ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ವೈಯುಕ್ತಿಕ ಕಾಳಜಿ ಮತ್ತು ಸ್ವಯಂ ರಕ್ಷಣೆ, ಡ್ರಗ್ ವ್ಯಸನದಿಂದ ಮುಕ್ತರಾಗುವ ಬಗೆ ಅದರ ದುಷ್ಪರಿಣಾಮಗಳು ಹಾಗೂ ಪೋಕ್ಸೋ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದರು. ಟ್ರಾಫಿಕ್ ನಿಯಮ ಮತ್ತು ಕಾಯಿದೆಗಳ ಪ್ರಾಮುಖ್ಯತೆ, ಅವಶ್ಯಕತೆ ಮತ್ತು ಅನುಸರಿಸುವುದರ ಬಗ್ಗೆ ತಿಳಿಸಿದರು. ಅಲ್ಲದೆ ಸಮಾಜದಲ್ಲಿ ಪೊಲೀಸರ ವಿವಿಧ ಪಾತ್ರಗಳು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ಇರುವ ವಿವಿಧ ಕಾಯಿದೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಉಪ ಪ್ರಾಂಶುಪಾಲರಾದ ಶ್ರೀ ಜಯಶೀಲ್ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಮ್ಯುನಿಟಿ ಅಸೋಸಿಯೇಷನ್ ಸಂಯೋಜಕರಾದ ಬಿಸಿಎ ವಿಭಾಗದ ಉಪನ್ಯಾಸಕಿ ಕು. ನಿಶ್ಮಿ ರೈ ಎನ್.ಉಪಸ್ಥಿತರಿದ್ದರು.ದ್ವಿತೀಯ ಬಿಸಿಎ ವಿದ್ಯಾರ್ಥಿನಿ ರಶೀತಾ ಕಾರ್ಯಕ್ರಮವನ್ನು ನಿರೂಪಿಸಿದರು.

   

Related Articles

error: Content is protected !!