ಕುಂದಾಪುರ : ದಿನಾಂಕ 10.01.2025 ರಂದು ರಾಷ್ಟ್ರೀಯ ಯುವ ದಿನಾಚರಣೆ ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ಸ್ಪರ್ಧಾತ್ಮಕ ಜಗತ್ತಿಗೆ ಯುವನಾಯಕರನ್ನು ರೂಪಿಸುವ ನಿಟ್ಟಿನಲ್ಲಿ ಹಾಗೂ ಯುವ ನಾಯಕತ್ವದ ಮಹತ್ವ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ಕುಂದಾಪುರದ ಮೂಡ್ಲಕಟ್ಟೆ ಐ ಎಂ ಜೆ ಇನ್ಸ್ಟಿಟ್ಯೂಶನ್ ನಲ್ಲಿ ಐ.ಎಂ.ಜೆ ಯಂಗ್ ಲೀಡರ್ ಅವಾರ್ಡ್- 2025 ಸ್ಪರ್ಧೆಯನ್ನು ಆಯೋಜಿಸಲಾಯಿತು. ಇದರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಮಾಜಿಕ ಕಾರ್ಯಕರ್ತರಾದ ಹಾವೇರಿಯ ಶ್ರೀ ರಮಣಗೌಡ ಬಿ ಪಾಟೀಲ್ ಅವರು ಮಾತನಾಡಿ ನಾಯಕತ್ವದ ಬಗ್ಗೆ ವಿವರಿಸುತ್ತ ನಿಜವಾದ ನಾಯಕನಾದವನು ತನ್ನ ಜೊತೆಗಿರುವರನ್ನು ಪ್ರೋತ್ಸಾಹಿಸುವ ಗುಣ ಹೊಂದಿರಬೇಕು. ಒಳ್ಳೆ ವಿದ್ಯಾಭ್ಯಾಸ ಪಡೆದು ತಂದೆ ತಾಯಿ ಗುರುಗಳಿಗೆ ಕೀರ್ತಿ ತಂದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಹಾಗೂ ಗೌರವ ಅತಿಥಿಗಳಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆ, ಕುಂದಾಪುರ ಇದರ ಮುಖ್ಯೋಪಾಧ್ಯಾಯರಾದ ಶ್ರೀ ವಿಘ್ನೇಶ್ವರ ಭಟ್ ಅವರು ಆಗಮಿಸಿದ್ದು ಒಳ್ಳೆ ನಾಯಕನಾಗಬೇಕಿದ್ದರೆ ಮುಂದೆ ಗುರಿ ಇರಬೇಕು ಹಿಂದೆ ಒಬ್ಬ ಗುರು ಇರಬೇಕು, ಹಾಗೆ ಅದಕ್ಕೆ ಪೂರಕವಾಗಿ ಸಾಧಿಸುವ ಛಲ ಹಾಗೂ ಪ್ರಯತ್ನ ಇರಬೇಕು, ಈ ನಿಟ್ಟಿನಲ್ಲಿ ತಾವೆಲ್ಲರೂ ಉತ್ತಮ ನಾಯಕರಾಗುವಲ್ಲಿ ಪ್ರಯತ್ನಿಸಿ ಎಂದು ವಿಧ್ಯಾರ್ಥಿಗಳಿಗೆ ಹುರಿದುಂಬಿಸಿದರು. ಐ ಎಂ ಜೆ ಇನ್ಸ್ಟಿಟ್ಯೂಷನ್ ಇದರ ಬ್ರಾಂಡ್ ಬಿಲ್ಡಿಂಗಿನ ನಿರ್ದೇಶಕರಾಗಿರುವ ಡಾ.ರಾಮಕೃಷ್ಣ ಹೆಗ್ಡೆ ಅವರು ಕಾರ್ಯಕ್ರಮದ ಮುಖ್ಯ ಉದ್ದೇಶದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಡಾಟಾ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊಫ಼ೆಸರ್ ಕಾರ್ತಿಕೇಯನ್ ಅವರು ಐಎಮ್ ಜೆ ಕಾಲೇಜಿನ ರೂಪುರೇಷೆಗಳ ಬಗ್ಗೆ ತಿಳಿಸಿದರು. ವಿವಿಧ ಕಾಲೇಜಿನ ಸ್ಪರ್ದಾಳುಗಳು, ಸಿಬ್ಬಂದಿ ವರ್ಗ, ಪೋಷಕರು ಉಪಸ್ಥಿತರಿದ್ದರು. ಎಮ್ ಬಿ ಎ ವಿಧ್ಯಾರ್ಥಿನಿ ಸಹರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೆಹ್ವಿಶ್ ಖಾನ ಸ್ವಾಗತಿಸಿ,ಎಮ್ ಬಿ ಎ ವಿಧ್ಯಾರ್ಥಿನಿ ಪ್ರತೀಕ ಶೆಟ್ಟಿ ವಂದಿಸಿದರು.