ಕರ್ನಾಟಕ ಸಂಘ ರತ್ನ ಹಾಗೂ ಭಾರತ ಸಂಘ ಸಿರಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಫ್ರೆಂಡ್ಸ್ ಸರ್ಕಲ್ (ರಿ.) ಮೀನು ಮಾರ್ಕೆಟ್ ರಸ್ತೆ , ಕುಂದಾಪುರ. ಇವರ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮೀನು ಮಾರ್ಕೆಟ್ ರಸ್ತೆಯ ಶ್ರೀ ನಾಗ ಬೊಬ್ಬರ್ಯ ದೇವಸ್ಥಾನದ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು.
ಸಂಘದ ಅಧ್ಯಕ್ಷರಾದ ಗಣೇಶ್ ನಾಯ್ಕ್ ಧ್ವಜಾರೋಹಣಗೈದರು. ಗೌರವಾಧ್ಯಕ್ಷರಾದ ಶೀನಾ ಖಾರ್ವಿ ಸ್ವಾತಂತ್ರ ದಿನದ ಸಂದೇಶವನ್ನು ತಿಳಿಸಿದರು. ಸಂಘದ ಸಂಚಾಲಕರಾದ ಸುಕುಮಾರ ನಾಯ್ಕ್ , ಪ್ರಧಾನ ಕಾರ್ಯದರ್ಶಿ ಚೇತನ್ ದೇವಾಡಿಗ , ಮಾಜಿ ಅಧ್ಯಕ್ಷರಾದ ಶರತ್ ಎಸ್ ಖಾರ್ವಿ, ಸಂತೋಷ ಮಾಣಿಮನೆ, ಮಂಜುನಾಥ್ ಪೂಜಾರಿ , ಶೇಖರ್ ಜಿ .ಖಾರ್ವಿ, ಉದಯ ಮಾಣಿಮನೆ, ಅನಿಲ್ ಯುಕೆ, ಸಂಘಟನಾ ಕಾರ್ಯದರ್ಶಿ ಮನೋಹರ್ ಪುತ್ರನ್ ಸಂಘದ ಸದಸ್ಯರುಗಳಾದ ರಮೇಶ ಬಾಬು,ಧನಪಾಲ ಪುತ್ರನ್ ,ಗುರುಪ್ರಸಾದ್ ಖಾರ್ವಿ , ಗಣೇಶ್ ಸಾಲಿಯಾನ್, ಸುರೇಶ್ ಪುತ್ರನ್, ಗಣಪತಿ ಖಾರ್ವಿ ಸನ್ವಿತ್, ಶಮಂತ್ ಎಸ್ ಖಾರ್ವಿ, ಅಮೋಘ ನಾಯ್ಕ್, ಮಂಜುನಾಥ್ ಖಾರ್ವಿ,ಜಗದೀಶ ಖಾರ್ವಿ, ಶ್ರೀಪೂಜಾರಿ, ವಿಜೇತ , ಸನತ್ ಖಾರ್ವಿ ಉಪಸ್ಥಿತರಿದ್ದರು. ಪರಿಸರದ ನಾಗರಿಕರು, ಶಾಲಾ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಿಹಿ ತಿಂಡಿ ವಿತರಿಸಲಾಯಿತು

