ಕೋಟ : ಇಲ್ಲಿನ ಕೋಟ ಮಣೂರು ಪಡುಕರೆಯ ಇಂಡಿಕಾ ಕಲಾ ಬಳಗ ಪ್ರತಿವರ್ಷ ನಡೆಸಲ್ಪಡುವ ಇಂಡಿಕಾ 15ನೇ ವರ್ಷೋತ್ಸವ ಕಾರ್ಯಕ್ರಮ ಫೆ,01 ರಂದು ಸಂಜೆ 6.00.ಗಂಟೆಗೆ ಮಣೂರು ಪಡುಕರೆ ಸರ್ಕಾರಿ ಸಂಯುಕ್ತ ಪ್ರೌಢಶಾಲಾ ವಠಾರದ ಗೀತಾನಂದ ರಂಗಮಂಟಪದಲ್ಲಿ ಜರುಗಲಿದೆ.
ಹಿರಿಯ ಯಕ್ಷಗಾನ ಕಲಾವಿದ ಗಾವಳಿ ಶೀನ ಕುಲಾಲ್ ಇವರಿಗೆ ಮೊಳಹಳ್ಳಿ ಹೆರಿಯ ನಾಯ್ಕ ಸ್ಮಾರಕ ಇಂಡಿಕಾ ಪುರಸ್ಕಾರ ಪ್ರದಾನಿಸಲಿದೆ
ಪ್ರತಿಭಾ ಪುರಸ್ಕಾರ ಕೋಟದ ಪಂಚವರ್ಣ ಸಂಘಟನೆಗೆ ವಿಶೇಷ ಪುರಸ್ಕಾರ,ಹಿರಿಯ ಕೃಷಿಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾಸ್ಕರ್ ಶೆಟ್ಟಿ,ಯಶಸ್ವಿ ಕಲಾವೃಂದ ಕೊಮೆ ಇದರ ಸಂಯೋಜಕ ವೆಂಕಟೇಶ ವೈದ್ಯ ತೆಕ್ಕಟ್ಟೆ ಇವರುಗಳಿಗೆ ಅಭಿನಂದನೆ, ಹುತಾತ್ನ ಯೋಧ ಬೀಜಾಡಿ ಅನೂಪ್ ಪೂಜಾರಿ ನುಡಿನಮನ ಈ ವೇದಿಕೆಯಲ್ಲಿ ನಡೆಯಲಿದೆ
ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಸ್ಥಳೀಯ ಅಂಗನವಾಡಿ ಹಾಗೂ ಶಾಲಾ ಮಕ್ಕಳ ನೃತ್ಯ ವೈವಿಧ್ಯ, ಅಮ್ಮ ಕಲಾವಿದರು ಮಂಗಳೂರು ಇವರಿಂದ ಅಪ್ಪ ನಾಟಕ ಪ್ರದರ್ಶನಗೊಳ್ಳಲಿದೆ. ಎಂದು ಇಂಡಿಕಾ ಕಲಾಬಳಗದ ಸಂಚಾಲಕ ಸಂತೋಷ್ ಕುಮಾರ್ ಕೋಟ,ಅಧ್ಯಕ್ಷ ಎಂ.ಜಯರಾಮ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.