ಕೋಟ : ಇಲ್ಲಿನ ಕೋಟ ಮಣೂರು ಪಡುಕರೆಯ ಇಂಡಿಕಾ ಕಲಾ ಬಳಗ ಪ್ರತಿ ವರ್ಷ ನೀಡುವ ಮೊಳಹಳ್ಳಿ ಹೆರಿಯ ನಾಯ್ಕ ಸ್ಮಾರಕ ಇಂಡಿಕಾ ಪುರಸ್ಕಾರಕ್ಕೆ, ಹಿರಿಯ ಯಕ್ಷಗಾನ ಕಲಾವಿದ ಗಾವಳಿ ಶೀನ ಕುಲಾಲ್ ಆಯ್ಕೆಯಾಗಿದ್ದಾರೆ. ಫೆ. 01 ರಂದು ಮಣೂರು ಪಡುಕರೆ ಸರ್ಕಾರಿ ಸಂಯುಕ್ತ ಪ್ರೌಢಶಾಲಾ ವಠಾರದ ಗೀತಾನಂದ ರಂಗಮAಟಪದಲ್ಲಿ ಇಂಡಿಕಾ 15ನೇ ವರ್ಷದ ಸಂಭ್ರಮ ಕಾರ್ಯಕ್ರಮ ಜರುಗಲಿದೆ. ವಿಶೇಷ ಪುರಸ್ಕಾರಕ್ಕೆ ಉಡುಪಿ ಜಿಲ್ಲೆಯ ಕ್ರೀಯಾಶೀಲ ಸಂಘಟನೆಯಾದ ಕೋಟದ ಪಂಚವರ್ಣ ಸಂಘಟನೆ ,ಸ್ಥಳೀಯ ವಿವಿಧ ಕ್ಷೇತ್ರದ ಸಾಧಕರಾದ ಹಿರಿಯ ಕೃಷಿಕ ಭಾಸ್ಕರ್ ಶೆಟ್ಟಿ ಮಣೂರು,ಸಾಂಸ್ಕೃತಿಕ ಚಿಂತಕ ವೆಂಕಟೇಶ್ ವೈದ್ಯ ಇವರುಗಳಿಗೆ ಅಭಿನಂದನೆ, ಪ್ರತಿಭಾ ಪುರಸ್ಕಾರ ಈ ವೇದಿಕೆಯಲ್ಲಿ ನಡೆಯಲಿದೆ.ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಸ್ಥಳೀಯ ಅಂಗನವಾಡಿ ಹಾಗೂ ಶಾಲಾ ಮಕ್ಕಳ ನೃತ್ಯ ವೈವಿಧ್ಯ, ಅಮ್ಮ ಕಲಾವಿದರು ಮಂಗಳೂರು ಇವರಿಂದ ಅಪ್ಪ ನಾಟಕ ಪ್ರದರ್ಶನಗೊಳ್ಳಲಿದೆ. ಎಂದು ಇಂಡಿಕಾ ಕಲಾಬಳಗದ ಸಂಚಾಲಕ ಸಂತೋಷ್ ಕುಮಾರ್ ಕೋಟ,ಅಧ್ಯಕ್ಷ ಎಂ.ಜಯರಾಮ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.