ಕುಂದಾಪುರ : ವ್ಯಾಪಾರಕೆಂದು ಬಂದ ಬ್ರಿಟಿಷರು ದೇಶದಲ್ಲಿ ಆಡಳಿತ ನಡೆಸುವಂತಾಗಲು ಕಾರಣ ನಮ್ಮಲ್ಲಿನ ಏಕತೆಯ ಕೊರತೆ ನಾವೆಲ್ಲ ಒಂದೇ ಎನ್ನುವ ಭಾವನೆ ಇದ್ದಿದ್ದರೆ ದೇಶವು ದಾಸ್ಯದ ಸಂಕೋಲೆಗೆ ಸಿಲುಕುತ್ತಿರಲಿಲ್ಲ ಪ್ರದೇಶಾಭಿಮಾನ ಬದಲು ದೇಶಾಭಿಮಾನ ಇದ್ದು ಈ ದೇಶ ನಮ್ಮದು ಎನ್ನುವ ಭಾವ ಇರಬೇಕು ಎಂದು ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್ ಆರ್ ಅವರು ಹೇಳಿದರು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ತಾಲೂಕು ಪಂಚಾಯತ್ ಹಾಗೂ ಕುಂದಾಪುರ ಪುರಸಭೆಯ ಆಶ್ರಯದಲ್ಲಿ ನಗರದ ಗಾಂಧಿ ಮೈದಾನದಲ್ಲಿ ನಡೆದ ಸ್ವಾತಂತ್ರೋತ್ಸವದ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಗೌರವ ವಂದನೇ ಸ್ವೀಕರಿಸಿ ಮಾತನಾಡಿದರು
ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿಗಳಾದ ಮಂಜುನಾಥ್ ಆರ್ ಕುಂದಾಪುರದ ಡಿ ವೈಎಸ್ ಪಿ ಬೆಳ್ಳಿಯಪ್ಪ ಪುರಸಭಾ ಸದಸ್ಯರಾದ ದೇವಕಿ ಸಣ್ಣಯ್ಯ ಶ್ರೀಧರ್ ಶೇರಿಗಾರ್ ರತ್ನಾಕರ ಶೇರಿಗಾರ್ ಪುಷ್ಪ ಶೇಟ್ ಪುರಸಭೆಯ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕ ರಾಘವೇಂದ್ರ ಉಪ ತಹಸಿಲ್ದಾರ್ ಶಂಕರ್ ಗಾಣಿಗ ಹಾಗೂ ವಿನಯ್ ಉಪಸ್ಥಿತರಿದ್ದರು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಎಸ್ ಶೆಟ್ಟಿ ಸ್ವಾಗತಿಸಿ ಯುವಜನ ಸೇವ ಮತ್ತು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ ವಂದಿಸಿದರು ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು