123
ಕೋಟ : ಇನ್ನರ್ ವೀಲ್ ಕ್ಲಬ್ ಕೋಟ ಸಾಲಿಗ್ರಾಮ ೨೦೨೫-೨೬ರ ಸಾಲಿನ ನೂತನ ಅಧ್ಯಕ್ಷರಾಗಿ ನಮಿತಾ ನರಸಿಂಹ ಪ್ರಭು ಆಯ್ಕೆಯಾದರು. ಇವರು ಜಿ.ಎಸ್.ಬಿ. ಮಹಿಳಾ ಸಂಘ ಕಾಶೀಮಠ ಕೋಟ ಇದರ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು ಈ ಹಿಂದೆಯೂ ಕೂಡಾ ೨೦೧೮-೧೯ರ ಸಾಲಿನ ಇನ್ನರ್‌ವೀಲ್ ಕೋಟ ಸಾಲಿಗ್ರಾಮದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವ ಇವರಿಗಿದೆ. ಹಾಗೂ ಇನ್ನಿತರ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

