Home » ಆಟಿದೊಂಜಿ ದಿನಾಚರಣೆ ಆಟಿದ ಅಟಿಲ್ – 2025
 

ಆಟಿದೊಂಜಿ ದಿನಾಚರಣೆ ಆಟಿದ ಅಟಿಲ್ – 2025

ಇನ್ನರ್ ವೀಲ್ ಕ್ಲಬ್ ಕೋಟ ಸಾಲಿಗ್ರಾಮ

by Kundapur Xpress
Spread the love

ಕೋಟ : ಇನ್ನರ್ ವೀಲ್ ಕ್ಲಬ್ ಕೋಟ ಸಾಲಿಗ್ರಾಮದ ಆಶ್ರಯದಲ್ಲಿ ರೋಟರಿ ಕೋಟ ಸಾಲಿಗ್ರಾಮದ ಸಭಾಭವನದಲ್ಲಿ ಮಳೆಗಾಲದ ವಿಶಿಷ್ಟ ಖಾದ್ಯಗಳೊಂದಿಗೆ ಆಟಿದ ಅಟಿಲ್ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಕಾರ್ಯಕ್ರಮ ಆಯೋಜಿಸಿತು.

ಮಳೆಗಾಲದಲ್ಲಿ ತಯಾರಿಸುವ ಬಗೆಬಗೆಯ ತಿಂಡಿ ತಿನಿಸು ಹಾಗೂ ಹಿರಿಯರು ಮನೆಯಲ್ಲಿ ತಯಾರಿಸುವ ಅಡುಗೆಗಳಲ್ಲಿ ಔಷಧ ಶಕ್ತಿಹೊಂದಿದ ಪತ್ರೊಡೆ, ಚಟ್ನಿ, ಕಡುಬು, ರಾಗಿಮುದ್ದೆ, ಹೊರಳಿ ಸಾರು, ಹಲಸು, ಧಾನ್ಯಗಳ ಖಾದ್ಯದೊಂದಿಗೆ ಇನ್ನರ್ ವೀಲ್ ಸದಸ್ಯೆಯರಿಂದ ಸಂಭ್ರಮದಿAದ ಆಟಿದೊಂಜಿ ದಿನಾಚರಣೆ ಆಚರಿಸಿದರು.

ಈ ಸಂದರ್ಭದಲ್ಲಿ ಈ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದ ಕೋಟ ಪರಿಸರದ ಪ್ರಸಿದ್ಧ ವಿದ್ಯಾ ಸಂಸ್ಥೆಯ ಕೋಟ ವಿವೇಕ ಪ್ರೌಢಶಾಲೆಯ ವಿದ್ಯಾರ್ಥಿ ನಿಧಿ ಪೈ ಅವರನ್ನು ಗೌರವಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಇನ್ನರ್ ವೀಲ್ ಕ್ಲಬ್ ಕೋಟ ಸಾಲಿಗ್ರಾಮದ ಅಧ್ಯಕ್ಷೆ ನಮಿತಾ ನರಸಿಂಹ ಪ್ರಭು ವಹಿಸಿದ್ದರು.

ಪರಿಸರ ಪ್ರೇಮಿ ಅಚ್ಯುತ ಪೂಜಾರಿ, ಇನ್ನರ್ ವೀಲ್ ಕ್ಲಬ್‌ನ ಕಾರ್ಯದರ್ಶಿ ಪೂಜಾ,ಇತರ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.

 

Related Articles

error: Content is protected !!