ಕುಂದಾಪುರ :ದಿಲ್ಲಿಯಲ್ಲಿ ಆಗಸ್ಟ್ 15ರಂದು ನಡೆಯುವ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಸಮಾರಂಭಕ್ಕೆ ಕುಂದಾಪುರ ತಾಲ್ಲೂಕಿನ ಸಿದ್ದಾಪುರದ ಕೆಳಪೇಟೆಯ ನಿವಾಸಿಗಳಾದ ಸೂರ ಪೂಜಾರಿ ಮತ್ತು ಗಿರಿಜಾ ಪೂಜಾರಿ ದಂಪತಿಯನ್ನುಕೇಂದ್ರ ಪ್ರಧಾನ ಮಂತ್ರಿ ಸಚಿವಾಲಯವು ಆಮಂತ್ರಿಸಿದೆ ಮಹಾತ್ಮ ಗಾಂಧಿ ಉದ್ಯೋಗ ಖಾತೆ ಯೋಜನೆಯ ಅಮೃತ ಸರೋವರ ಯೋಜನೆಯಲ್ಲಿ ಸಿದ್ದಾಪುರ ಗ್ರಾಮದ ಬ್ರಹ್ಮಕೆರೆಯನ್ನು 100 ದಿನದಲ್ಲಿ ಮಾನವ ಶ್ರಮದ ಮೂಲಕ ಹೊಳೆತ್ತುವ ಕಾರ್ಯವನ್ನು ಇವರು ಮಾಡಿದ್ದರು
ರಾಜ್ಯದಿಂದ ಒಟ್ಟು 6 ದಂಪತಿಗಳನ್ನು ಅಗಸ್ಟ್ 15 ರ ಸ್ವಾತಂತ್ರೋತ್ಸವದ ಧ್ವಜಾರೋಹಣ ಸಮಾರಂಭಕ್ಕೆ ಆಯ್ಕೆಯಾಗಿದ್ದಾರೆ