ಕೋಟ : ಕೋಟ ಹದಿನಾಲ್ಕು ಗ್ರಾಮಗಳ ಅಧಿದೇವತೆ, ಜಗದೊಡೆಯ ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವರ ವಾರ್ಷಿಕ ರಥೋತ್ಸವವು ಇದೇ ಜನವರಿ 10ರಂದು ಆರಂಭಗೊಂಡು ರಥಾರಂಭದಿಂದ ತೊಡಗಿ ಜ.16ರ ಬ್ರಹ್ಮ ರಥೋತ್ಸವ ಮತ್ತು ಹತ್ತು ದಿನಗಳಿಗೂ ಮಿಕ್ಕಿ ವಿವಿಧ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾ ಭಕ್ತಿ ಸಂಭ್ರಮಗಳಿಂದ ಸಂಪನ್ನಗೊಳ್ಳಲಿದ್ದು ಊರ ಪರವೂರ, ವಿದೇಶಗಳಲ್ಲಿ ನೆಲಸಿರುವ ಅಸಂಖ್ಯಾತ ಭಕ್ತರು ಭಾಗವಹಿಸುವಂತಾಗಲೆಂದು ದೇಗುಲದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಮತ್ತು ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ತುಂಗರು ಶ್ರೀ ದೇವರ ಮಂದೆ ಫಲ ಪ್ರಾರ್ಥನೆಯನ್ನು ಸಲ್ಲಿಸಿದರು. ಆಮಂತ್ರಣ ಪತ್ರಿಕೆಯನ್ನು ದೇವರಿಗೆ ಸಮರ್ಪಿಸಿದ ಅರ್ಚಕ ಉಳ್ತೂರು ರಮೇಶ ಅಡಿಗರು ಉತ್ಸವಾದಿಗಳು ಆಂಜನೇಯ ಮತ್ತು ಪರಿವಾರ ದೇವತೆಗಳೊಂದಿಗೆ ಶ್ರೀ ಮದ್ಯೋಗಾನಂದ ಗುರು ನರಸಿಂಹನ ಅನುಗ್ರಹದಿಂದ ನಿರ್ವಿಘ್ನವಾಗಿ ನೆರವೇರಲೆಂದು ವಿಶೇಷವಾಗಿ ನಿವೇದಿಸಿಕೊಂಡು ಗಣ್ಯರು ಬಿಡುಗಡೆಗೊಳಿಸಿದರು.