Home » ನೇಹಾ ಮನೆಗೆ ನಡ್ಡಾ ಭೇಟಿ
 

ನೇಹಾ ಮನೆಗೆ ನಡ್ಡಾ ಭೇಟಿ

by Kundapur Xpress
Spread the love

ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಬಿಜೆಪಿ ಇದಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

ಅವರು ಭಾನುವಾರ ಇಲ್ಲಿಯ ಬಿಡನಾಳದಲ್ಲಿರುವ ಮೃತ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಮಂತ್ರಿ ಜಿ. ಪರಮೇಶ್ವರ ಅವರು ತನಿಖೆಯ ದಾರಿ ತಪ್ಪಿಸುವಂತಹ ಹೇಳಿಕೆ ನೀಡುತ್ತಿರುವುದು ವಿಷಾದನೀಯ ಎಂದರು.

ಕಾಂಗ್ರೆಸ್ ಸರ್ಕಾರ ಈ ರೀತಿ ಮಾಡುವ ಮೂಲಕ ತುಷ್ಟಿಕರಣ ಮಾಡುತ್ತಿದೆ. ಇದನ್ನು ಕರ್ನಾಟಕದ ಜನತೆ ಯಾವತ್ತು ಕ್ಷಮಿಸುವುದಿಲ್ಲ ಜನರು ಈ ಪ್ರಕರಣ ದಲ್ಲಿ ನ್ಯಾಯ ದೊರೆಯವುದೆಂದು ನಿರೀಕ್ಷೆಯಲ್ಲಿದ್ದಾರೆ. ರಾಜ್ಯ ಪೊಲೀಸರು ತನಿಖೆ ನಡೆಸುವಲ್ಲಿ ಆಸಮರ್ಥರಿದ್ದು ಸಿಬಿಐಗೆ ಒಪ್ಪಿಸಲು ಆಗ್ರಹವಾಗಿದೆ ಎಂದು ಹೇಳಿದರು.

   

Related Articles

error: Content is protected !!