Home » ಇಂಡಿಯಾ ಒಕ್ಕೂಟ ಭ್ರಷ್ಟರ ಕೂಟ
 

ಇಂಡಿಯಾ ಒಕ್ಕೂಟ ಭ್ರಷ್ಟರ ಕೂಟ

by Kundapur Xpress
Spread the love

ಕಲಬುರಗಿ : ಲೋಕಸಭಾ ಚುನಾವಣೆ ನಿಮಿತ್ತ ಕಾಂಗ್ರೆಸ್ ರಚನೆ ಮಾಡಿದ ಇಂಡಿಯಾ ಒಕ್ಕೂಟದ ಸರ್ವ ಪಕ್ಷಗಳು, ಭ್ರಷ್ಟಾಚಾರದ ಪಕ್ಷಗಳಾಗಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಆರೋಪಿಸಿದರು.

ನಗರದ ಸೂಪರ್ ಮಾರ್ಕೆಟ್‌ನಲ್ಲಿ ಅದ್ದೂರಿ ರೋಡ್ ಶೋ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂಡಿಯಾ ಅಲೈನ್ಸ್ ಇದೊಂದು ಘಮಂಡಿ ಅಲೈನ್ಸ್ ಆಗಿದ್ದು, ಅದರೊಳಗಿನ ಎಲ್ಲ ಪಕ್ಷಗಳ ನಾಯಕರು ಒಂದಿಲ್ಲೊಂದು ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರಾಗಿದ್ದಾರೆ ಎಂದರು. ಕಳೆದ ಹತ್ತು ವರ್ಷಗಳ ಆಡಳಿತದ ಅವಧಿಯಲ್ಲಿ ನಾವು ದೇಶದಲ್ಲಿನ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತಿದ್ದರೆ, ಇವರು ಭ್ರಷ್ಟಾಚಾರವನ್ನು ಎಸಗುತ್ತಿದ್ದಾರೆ.

ಭ್ರಷ್ಟಾಚಾರದ ತನಿಖೆಗೆ ಆದೇಶ ಮಾಡಿದರೆ, ಅದನ್ನು ವಿರೋಧಿ ಸಲು ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಕಳೆದ 50 ವರ್ಷಗಳ ಆಡಳಿತದ ಅವಧಿಯಲ್ಲಿ ಕಲ್ಲಿದ್ದಲು ಹಗರಣ, 2ಜಿ ಹಗರಣ, ಕಾಮನ್‌ವೆಲ್ತ್ ಹಗರಣ, ಹೆಲಿಕಾಪ್ಟರ್ ಹಗರಣ ಸೇರಿದಂತೆ ಹಲವು ಹಗರಣ ಮಾಡಿ, ಕಾಂಗ್ರೆಸ್ ಹಲವು ನಾಯಕರು ಇಂದು ಜಾಮೀನಿನ ಮೇಲೆ ತಿರುಗಾಟ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು

   

Related Articles

error: Content is protected !!