Home » ಜಡ್ಕಲ್ ಗ್ರಾಮ ಪಂಚಾಯತ್ ವಿಶೇಷ ಗ್ರಾಮಸಭೆ
 

ಜಡ್ಕಲ್ ಗ್ರಾಮ ಪಂಚಾಯತ್ ವಿಶೇಷ ಗ್ರಾಮಸಭೆ

ಕಸ್ತೂರಿ ರಂಗನ್ ವರದಿಗೆ ವಿರೋಧ

by Kundapur Xpress
Spread the love

ಜಡ್ಕಲ್ : ಕಸ್ತೂರಿ ರಂಗನ್ ವರದಿ ವಿರೋಧಿಸಿ ಜಡ್ಕಲ್ ಗ್ರಾಮ ಪಂಚಾಯತ್ ವಠಾರದಲ್ಲಿ ವಿಶೇಷ ಗ್ರಾಮಸಭೆ ನಡೆಯಿತು. ಜಡ್ಕಲ್, ಮುದೂರು ವ್ಯಾಪ್ತಿಯ ಸಹಸ್ರಾರು ಗ್ರಾಮಸ್ಥರು ಜಡ್ಕಲ್ ಮತ್ತು ಮುದೂರು ಗ್ರಾಮವನ್ನು ಪರಿಸರ ಅರಣ್ಯ ಸೂಕ್ಷ್ಮ ಪ್ರದೇಶದಿಂದ ಕೈ ಬಿಡುವಂತೆ ಗ್ರಾಮ ಸಭೆಯಲ್ಲಿ ಆಗ್ರಹಿಸಿದರು. ಮನುಷ್ಯನ ಮೂಲಭೂತ ಹಕ್ಕಾಗಿರುವ ಬದುಕುವ ಹಕ್ಕನ್ನು ಕಸಿಯುವ ಇಂತಹ ವರದಿಗಳು ಯಾವ ಕಾಲಕ್ಕೂ ಪ್ರಸ್ತುತವಲ್ಲ ಎ೦ದು ಅಭಿಪ್ರಾಯ ವ್ಯಕ್ತಪಡಿಸಿದರು. ವರದಿಯ ಶಿಫಾರಾಸಿನಲ್ಲಿ ಜಡ್ಕಲ್, ಮುದೂರು, ಕೊಲ್ಲೂರು ಗ್ರಾಮವನ್ನು ಮುಂದುವರಿಸಿದ್ದೇ ಆದಲ್ಲಿ ಉಗ್ರ ಹೋರಾಟ ಕೈಗೆತ್ತಿಕೊಳ್ಳುವ ಎಚ್ಚರಿಕೆ ನೀಡಿದರು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾನೂನು ತಜ್ಞರಾದ ಬೆಳ್ತ೦ಗಡಿಯ ರೇವ್, ಡಾ ಸಲೀನ್ ಜೋಸೇಫ್, ಪರಿಸರ ಸಂರಕ್ಷಣೆ ಮಾಡುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕಸ್ತೂರಿ ರಂಗನ್ ವರದಿ ಜಾರಿಯಾಗುವ ಎಲ್ಲಾ ಸೂಚನೆಗಳು ಬಂದಿವೆ.ಈಗಾಗಲೇ ಆರನೇ ಅಧಿಸೂಚನೆಯನ್ನು ನೀಡಲಾಗಿದೆ.ಜನವಸತಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ವರದಿಯಲ್ಲಿ ಹೇಳಲಾಗಿದೆ.ಉಡುಪಿ ಜಿಲ್ಲೆಯ 35 ಗ್ರಾಮಗಳು ವರದಿಯಡಿಯಲ್ಲಿವೆ.

ಕಸ್ತೂರಿ ರಂಗನ್ ಸಮಿತಿಯಲ್ಲಿ ಯಾರೂ ದಕ್ಷಿಣ ಭಾರತದವರಿಲ್ಲ ಎನ್ನುವುದು ಕೂಡ ವಿಷಾದನೀಯ.ಜನವಸತಿ ಹೊಂದಿರುವ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ವರದಿಯಲ್ಲಿ ಶಿಫಾರಸ್ಸು ಮಾಡಿರುವುದು ಖಂಡನೀಯ.ಇದು ವಸ್ತುಸ್ಥಿತಿ ಪರಿಗಣಿಸದೇ ಮಾಡಿರುವ ತಪ್ಪು, ಜನರು ಧ್ವನಿ ಎತ್ತಬೇಕಿದೆ.ಜನವಸತಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ವರದಿ ಜಾರಿ ಮಾಡಿದ್ದಲ್ಲಿ ಇಲ್ಲಿನ ಜನರ ಬದುಕು ಮೂರಾಬಟ್ಟೆಯಾಗುವುದು ಸ್ಪಷ್ಟ ಹೀಗಾದರೇ, ಕೋವಿಡ್ ಕಾಲಘಟ್ಟದ ಪರಿಸ್ಥಿತಿಗಿ೦ತಲೂ ಬದುಕು ಚಿಂತಾಜನಕವಾಗಲಿದೆ ಎಂದರು.

ಸಮಗ್ರ ಗ್ರಾಮೀಣ ಆಶ್ರಮ ಕಾಪು ಇದರ ಅಧ್ಯಕ್ಷರಾದ ಅಶೋಕ್ ಕುಮಾ‌ರ್ ಶೆಟ್ಟಿ, ಕಸ್ತೂರಿ ರಂಗನ್ ವರದಿ ಹಾಗೂ ಮಾಧವ ಗಾಡೀಳ್ ವರದಿಯ ಬಗ್ಗೆ ತಿಳಿಸಿಕೊಟ್ಟರು.ಪರಿಸರ ಸೂಕ್ಷ್ಮ ಪ್ರದೇಶ ಉಳಿಸುವಿಕೆ ನಿಟ್ಟಿನಲ್ಲಿ ಅಭಿವದ್ಧಿ ಚಟುವಟಿಕೆಗಳಿಗೆ ನಿರ್ಬಂಧ, ಹಸಿರುಬೆಳೆ ಉತ್ತೇಜಿಸುವುದು, ನೈಸರ್ಗಿಕ ಸೂಕ್ಷ್ಮ ಪ್ರದೇಶಗಳ ಗುರುತಿಸುವಿಕೆ ಮತ್ತು ರೂಪಿಸುವಿಕೆ, ಪಶ್ಚಿಮಘಟ್ಟಗಳಲ್ಲಿ ಮೇಲ್ವಿಚಾರಣಾ ಕೇಂದ್ರ ಸ್ಥಾಪಿಸುವುದು ಸೇರಿದಂತೆ ಪಶ್ಚಿಮಘಟ್ಟ ಸಂರಕ್ಷಣೆಗೆ ಬೇಕಾದ ಮಹತ್ವಪೂರ್ಣ ಶಿಫಾರಾಸುಗಳನ್ನು ವರದಿಯಲ್ಲಿ ದಾಖಲಿಸಿದೆ.

ಗೋವಾ, ಗುಜರಾತ್, ಕರ್ನಾಟಕ, ಕೇರಳ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳು ವರದಿಯ ಶಿಫಾರಾಸಿಗೆ ಒಳಪಟ್ಟಿವೆ. ಜನರನ್ನು ಒಕ್ಕಲೆಬ್ಬಿಸುವಂತೆ ಎಲ್ಲಿಯೂ ವರದಿಯಲ್ಲಿ ಉಲ್ಲೇಖಿಸಿಲ್ಲ. ಕೆಂಪು ಪಟ್ಟಿ, ಕಿತ್ತಳೆ ಪಟ್ಟಿಗಳ ನಿಷೇದ ಮತ್ತು ಗ್ರಾಮ ಸಭೆಯ ಷರತ್ತುಬದ್ಧ ನಿಯಮಗಳ ಅನುಮತಿಯ ಮೇರೆಗೆ ಕಿರು ಜಲ ವಿದ್ಯುತ್ ಯೋಜನೆಗಳಿಗೆ ಅವಕಾಶವಿದ್ದರೂ, ಶೇ. 30 ರಷ್ಟು ಅದರಲ್ಲಿ ನೀರು ಕಾಯ್ದಿರಿಸಿಕೊಳ್ಳಬೇಕು.ಹಂತಹಂತವಾಗಿ ಐದು ವರ್ಷಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿರುವ ಕೈಗಾರಿಕೆಗಳು,ಗಣಿಗಾರಿಕೆಗಳು ತೆರವುಗೊಳಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

   

Related Articles

error: Content is protected !!