ಕೋಟ: ಜನತಾ ಸಂಸ್ಥೆ ಆಲದ ಮರವಿದ್ದಂತೆ ಅದರ ನೆರಳಿನಲ್ಲಿ ಸಾವಿರಾರು ಕುಟುಂಬಗಳು ಆಶ್ರಯ ಪಡೆದಿವೆ ಎಂದು ಜನತಾ ಫಿಶ್‍ಮಿಲ್‍ನ ವ್ಯವಸ್ಥಾಪಕ ಶ್ರೀನಿವಾಸ್ ಕುಂದರ್ ಹೇಳಿದರು.
ಶನಿವಾರ ಜನತಾ ಫಿಶ್‍ಮಿಲ್ ಅಂಡ್ ಆಯಿಲ್ ಪ್ರಾಡಕ್ಟ್ ಕೋಟ ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದವರಿಗೆ ಬಿಳ್ಕೊಡುಗೆ ಬಾಂಧವ್ಯ ಶಿರ್ಷಿಕೆ ಕಾರ್ಯಕ್ರಮದಲ್ಲಿ ನಿವೃತ್ತ ಅನುಭವ ಹಂಚಿಕೊಂಡು ಮಾತನಾಡಿ ಉದ್ಯಮ ಕ್ಷೇತ್ರದಲ್ಲಿ ಜನತಾ ಹೊಸ ಭಾಷ್ಯ ಬರೆದಿದೆ, ಅಲ್ಲದೆ ನಮ್ಮಂತ ಸಾವಿರಾರು ಕುಟುಂಬಗಳ ಆಶ್ರಯತಾಣವಾಗಿದೆ ಇಷ್ಟು ವರ್ಷದ ಕಾರ್ಯನಿರ್ವಹಣೆ ತೃಪ್ತಿ ತಂದಿದೆ ಎಂದರು
ಕಾರ್ಯಕ್ರಮದಲ್ಲಿ ಗೀತಾನಂದ ಫೌಂಡೇಶನ್ ನಿರ್ದೇಶಕಿ ಗೀತಾ ಆನಂದ ಸಿ ಕುಂದರ್,ಜನತಾ ಸಂಸ್ಥೆಯ ನಿರ್ದೇಶಕರಾದ ಪ್ರಶಾಂತ ಎ ಕುಂದರ್, ಪತ್ನಿ ದಿವ್ಯ ಲಕ್ಷ್ಮೀ ಪ್ರಶಾಂತ ಕುಂದರ್,ರಕ್ಷಿತ್ ಎ.ಕುಂದರ್ ಪತ್ನಿ ವ್ಯೆಷ್ಣವಿ ರಕ್ಷಿತ್ ಕುಂದರ್ ಮತ್ತಿತರರು ಇದ್ದರು.ನಿವೃತ್ತರ ಕುರಿತಾಗಿ ರವಿಕಿರಣ್ ಕೋಟ,ಮಮತಾ ಗುಳ್ಳಾಡಿ,ಶಿಲ್ಪಾ,ಪ್ರಕಾಶ್,ಮಿಥುನ್,ರೇಷ್ಮಾ ಜೋಗಿ,ದೀಪಿಕಾ ಮಾತನಾಡಿದರು.
ಕಾರ್ಯಕ್ರಮವನ್ನು ದಾಮೋದರ ಶರ್ಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದ ರಮೇಶ ಹೆಚ್ ಕುಂದರ್, ಉದಯ ಶೆಟ್ಟಿ ಮಣೂರು, ಸಮುದ್ಯತಾ ಗ್ರೂಪ್ಸ್ ಕೋಟ ಯೋಗೆಂದ್ರ ತಿಂಗಳಾಯ ಇವರುಗಳನ್ನು ಗೌರವಿಸಲಾಯಿತು. ಸಮುದ್ಯತಾ ಗ್ರೂಪ್ಸ್ ಕೋಟ ಇವೆಂಟ್ ವ್ಯವಸ್ಥೆ ಕಲ್ಪಿಸಿದರು.