223
ಕುಂದಾಪುರ : ಸಮೀಪದ ತಲ್ಲೂರು ಇಲ್ಲಿನ ಜಯರಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025 – 26ನೇ ಸಾಲಿನ ವಲಯ ಮಟ್ಟದ ಖೋ ಕೋ ಪಂದ್ಯಾಟದ ಕ್ರೀಡಾಕೂಟವು ಜರುಗಿತು
ಕ್ರೀಡಾಕೂಟದ ಉದ್ಘಾಟನೆಯನ್ನು ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಿರೀಶ್ ನಾಯ್ಕ್ ನೆರವೇರಿಸಿದರು ಸಮಾರಂಭದಲ್ಲಿ ಬೈಂದೂರು ವಲಯದ ಇ ಸಿ ಓ ಯೋಗೇಶ್ ಹಾಗೂ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾದ ಉದಯ್ ಕುಮಾರ್ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಅರುಣ್ ಕುಮಾರ್ ಜಯರಾಣಿ ಆಂಗ್ಲ ಮಾಧ್ಯಮ ಶಾಲೆಯ ವ್ಯವಸ್ಥಾಪಕರಾದ ಸಿಸ್ಟರ್ ಜೂಲಿ ಮುಖ್ಯೋಪಾಧ್ಯಾಯನಿ ಸಿಸ್ಟರ್ ಅವಿಲಾ ಉಪಸ್ಥಿತರಿದ್ದರು
ಸಹ ಶಿಕ್ಷಕಿ ಸ್ವಾತಿ ಆಚಾರ್ಯ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿ ಸ್ವಾತಿ ಎಸ್ ಸ್ವಾಗತಿಸಿ ಸಹ ಶಿಕ್ಷಕರಾದ ಸುಮಂತ್ ವಂದಿಸಿದರು

