ಕುಂದಾಪುರ: ಸಂಗೀತ ಶಿಕ್ಷಕ ಪ್ರಕಾಶ್ ಕುಂದಾಪುರ ಸಾರಥ್ಯದ ಜಿಯಾ ಮ್ಯೂಸಿಕಲ್ (ರಿ) ಕುಂದಾಪುರ ಮತ್ತು ಸದ್ಗುರು ಶ್ರೀಮಾತಾ ಸೌಹಾರ್ದ ಸಹಕಾರಿ(ನಿ) ನಿಯೋಜಿತ ವಕ್ವಾಡಿ-ಕಾಳವಾರ ಆಯೋಜನೆಯಲ್ಲಿ ರಾಜ್ಯಮಟ್ಟದ ಕರೋಕೆ ಗೀತಗಾಯನ ಸ್ಪರ್ಧೆ ಕುಂದಾಪುರ ಜ್ಯೂನಿಯರ್ ಕಾಲೇಜಿನ ರೋಟರಿ ಲಕ್ಷ್ಮಿ ನರಸಿಂಹ ಕಲಾಮಂದಿರದಲ್ಲಿ ಜರುಗಿತು. ಉದ್ಘಾಟನ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕುಂದಾಪುರದ ಭೂ ಅಭಿವೃದ್ದಿ ಬ್ಯಾಂಕಿನ ಅಧ್ಯಕ್ಷರಾದ ಶಿವರಾಮ್ ಶೆಟ್ಟಿ ಮಲ್ಯಾಡಿ ವಹಿಸಿಕೊಂಡಿದ್ದರು.
ಮುಖ್ಯ ಅಥಿತಿಗಳಾಗಿ ಶ್ರೀ ಮಹಾಲಿಂಗೇಶ್ವರ ಕಾಳಿಂಗ (ಸುಬ್ರಹ್ಮಣ್ಯ) ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಹೆಗ್ಡೆ ಶಾನಾಡಿ, ನಿವೃತ್ತ ಬ್ಯಾಂಕ್ ಮ್ಯಾನೇಜರ್ ರಾಮಕೃಷ್ಣ, ನಾಗರಿಕ ಹಿತರಕ್ಷಣಾ ವೇದಿಕೆ ಹಾಲಾಡಿಯ ಅಧ್ಯಕ್ಷರಾದ ನಾಗರಾಜ್ ಗೋಳಿ, ಜೆ.ಸಿ.ಐ ಕುಂದಾಪುರದ ಅಧ್ಯಕ್ಷರಾದ ಸುಧಾಕರ್ ಕಾಂಚನ್, ಖ್ಯಾತ ನಿರೂಪಕರು, ಸಂಘಟಕರಾಗಿರುವ ಸಂದೇಶ್ ಶೆಟ್ಟಿ ಸಳ್ವಾಡಿ ಮತ್ತಿತರ ಗಣ್ಯರು ಭಾಗವಹಿಸಿದ್ದರು
ಸಂಜೆ ನೆಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಸದ್ಗುರು ಶ್ರೀಮಾತಾ ಸೌಹಾರ್ದ ಸಹಕಾರಿ(ನಿ) ನಿಯೋಜಿತ ವಕ್ವಾಡಿ-ಕಾಳವಾರದ ಮುಖ್ಯ ಪ್ರವರ್ತಕರಾದ ಸುದೀರ್ ಜಿ. ಕಾಳಾವರ, ಕುಂದಾಪುರ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾದ ಶಂಕರ ಅಂಕದಕಟ್ಟೆ, ಕುಂದಾಪುರ ಪುರಸಭಾ ಸದಸ್ಯರಾದ ಶೇಖರ ಪೂಜಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯೆ ರಾಷ್ಟ್ರೀಯ ಸ್ವಸಹಾಯ ಸಂಘಗಳ ತರಬೇತಿ ಸಂಸ್ಥೆ ಉಡುಪಿಯ ಪ್ರಾಂಶುಪಾಲರಾದ ಉಲ್ಲಾಸ್ ಮೇಸ್ತ, ಪತ್ರಕರ್ತೆ ಅಕ್ಷತಾ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯಮಟ್ಟದ ಕರೋಕೆ ಗೀತ ಗಾಯನ ಸ್ಪರ್ಧೆಯಲ್ಲಿ ರಾಜ್ಯದ ನಾನಾ ಕಡೆಗಳಿಂದ ಒಟ್ಟು ಎಪ್ಪತೈದು ಜನ ಸ್ಪರ್ಧಿಗಳು ಭಾಗವಹಿಸಿದ್ದರು. ಅಂತಿಮ ಸುತ್ತಿಗೆ ಇಪ್ಪತೈದು ಜನ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಯಿತು. ಅದರಲ್ಲಿ ಅಶ್ಮಿತ್ ಎಜೆ ಮಂಗಳೂರು ಪ್ರಥಮ, ಪೂಜಾ ಬಳ್ಕೂರು ದ್ವಿತೀಯ ಮತ್ತು ಎಚ್. ಜಿ. ಮೋಹನ್ ಸಾಗರ ತೃತೀಯ ನಗದು ಪುರಸ್ಕಾರ, ಫಲಕ, ಪಾರಿತೋಷಕವನ್ನು ಪಡೆದರು. ತೀರ್ಪುಗಾರರಾಗಿ ಅನುರಾದ ಎ.ಪಿ ಮಯ್ಯ ಹಿಲಿಯಾಣ ವಿನುಷ್ ಭಾರದ್ವಾಜ್ ರಘುರಾಮ್ ಮಲ್ಲಾರ್ ಮತ್ತು ಶಶಿಕಲಾ ಕಾಳಾವಾರ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಸ್.ಪಿ ಮ್ಯೂಸಿಕಲ್ ಕುಂದಾಪುರದ ಪ್ರಮುಖರಾದ ರಾಜೇಶ್ ಎಸ್. ಪಿ., ಗಣೇಶ್ ಮೊಳಹಳ್ಳಿ, ವಿಘ್ನೇಶ್ ಕುಂದಾಪುರ, ಹರೀಶ್ ಕುಲಾಲ್ ಕೆದೂರು ಭಾಗವಹಿಸಿದ್ದರು. ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು