ನವದೆಹಲಿ : ಮಾಜಿ ಶಾಸಕಿ ತೇಜಸ್ವಿನಿ ಗೌಡ ಅವರು ದೆಹಲಿಯಲ್ಲಿ ಶನಿವಾರ ಜೈರಾಂ ರಮೇಶ್ ಸಮ್ಮುಖ ದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಬಿಜೆಪಿಗೆ ಪ್ರಜಾಸತ್ತಾತ್ಮಕ, ಸ್ಥಳೀಯ ನಾಯಕತ್ವ, ‘ಮಾಸ್ ಲೀಡರ್‌ಶಿಪ್‌ನಲ್ಲಿ ನಂಬಿಕೆ ಇಲ್ಲ. ಕೇವಲ ಮೋದಿಯವರ ಮಾಂತ್ರಿಕ ಶಕ್ತಿಯ ಮೇಲೆ ಮಾತ್ರ ನಂಬಿಕೆಯಿದೆ. ದೇಶಕ್ಕಿಂತ ಮೋದಿ ‘ಮಾಂತ್ರಿಕ ಶಕ್ತಿ ದೊಡ್ಡದು ಎನ್ನುವ ಭ್ರಮೆಯಲ್ಲಿ ಬಿಜೆಪಿ ತೇಲುತ್ತಿದೆ ಎಂದು ಟೀಕಿಸಿದರು.
ಪ್ರತಾಪ್‌ಗೆ ಟಿಕೆಟ್ ನೀಡದಿದ್ದರೆ ಮೈಸೂರಿನಿಂದ ನನಗೆ ಟಿಕೆಟ್ ಕೊಡಿ ಎಂದಿದ್ದೆ. ಬೆಂಗಳೂರು ಉತ್ತರದಿಂದಲಾದರೂ ಟಿಕೆಟ್ ಕೇಳಿದ್ದೆ, ಕೊಡಲಿಲ್ಲ ಬಿಜೆಪಿಯಲ್ಲಿ ಒಕ್ಕಲಿಗ ನಾಯಕರಿಗೆ ತಾಕತ್ತು ಇದ್ದಿದ್ದರೆ ಜೆಡಿಎಸ್ ಜೊತೆ ಹೋಗುವ ಅನಿವಾರ್ಯತೆ ಏಕೆ ಬರುತ್ತಿತ್ತು?. ಆದರೆ, ಒಕ್ಕಲಿಗರ ಹಿತ ಕಾಪಾಡುವಲ್ಲಿ ಡಿಕೆಶಿ ಸಮರ್ಥರಾಗಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ. ಸುರೇಶ್ ಅವರನ್ನು ನಾವು ಗೆಲ್ಲಿಸಲೇಬೇಕು. ಅವರ ಪರ ಪ್ರಚಾರ ಮಾಡುತ್ತೇನೆ ಎಂದರು