ಉಡುಪಿ : ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರಿನ ಮನೆಯಲ್ಲಿ ನವಂಬರ್ 12 ರಂದು ನಡೆದ ಒಂದೇ ಕುಟುಂಬದ ನಾಲ್ವರ ಕಗ್ಗೋಲೆಯ ನರಮೇಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರವೀಣ್ ಅರುಣ್ ಚೌಗುಳೆ ಎಂಬಾತನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ತಿಳಿಸಿದ್ದಾರೆ ಅವರು ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿಯನ್ನು ವಿವರಿಸಿದರು ಪ್ರಕರಣ ಸಂಬಂಧ ಹಲವಾರು ಆಯಾಮದಲ್ಲಿ ತನಿಖೆ ಮಾಡುತ್ತಿದ್ದೇವೆ ಕೊಲೆಗೆ ನಿಖರ ಕಾರಣ ಏನು ಎಂಬುದನ್ನು ತನಿಖೆ ನಡೆಸಿ ಮಾಹಿತಿಯನ್ನು ನೀಡುತ್ತೇವೆ ಎಂದರು
ಉಡುಪಿ ಜಿಲ್ಲೆ ಮತ್ತು ಬೆಳಗಾವಿ ಜಿಲ್ಲೆಯ ಪೊಲೀಸರ ಸಹಕಾರದಿಂದ ಆರೋಪಿಯನ್ನು ಬಂಧಿಸಲಾಗಿದೆ ಆರೋಪಿಯು ಮಹಾರಾಷ್ಟ್ರದ ಸಾಂಗ್ಲಿ ಮೂಲದವನಾಗಿದ್ದು ಏರ್ ಇಂಡಿಯಾದಲ್ಲಿ ಸೂಪರ್ ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದು ಅದೇ ವಿಮಾನದಲ್ಲಿ ಗಗನಸಖಿಯಾಗಿ ಕೊಲೆಯಾದ ಅಯ್ನಾಝ್ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ ಎಂದರು
ಉನ್ನತ ಪೊಲೀಸ್ ಮೂಲಗಳ ಪ್ರಕಾರ ವಿವಾಹಿತನಾಗಿರುವ ಪ್ರವೀಣ್ ಚೌಗುಲೆ ತಾನು ಕೆಲಸ ಮಾಡಿಕೊಂಡಿದ್ದ ವಿಮಾನದಲ್ಲಿ ಗಗನಸಖಿಯಾಗಿದ್ದ ಅಯ್ನಾಝ್ ಎಂಬವಳೊಂದಿಗೆ ಸ್ನೇಹ ಸಂಬಂಧ ಹೊಂದಿದ್ದು ಈ ಬಗ್ಗೆ ಪ್ರವೀಣನ ಮಡದಿ ಅಯ್ನಾಝ್‌ಗೆ ಕರೆ ಮಾಡಿ ವಿಚಾರಿಸಿದ್ದಾಳೆ ತಕ್ಷಣ ಪ್ರವೀಣ್ ಹಾಗೂ ಆತನ ಪತ್ನಿಯ ನಂಬರನ್ನು ಯುವತಿ ಬ್ಲಾಕ್ ಮಾಡಿದ್ದಾಳೆ ಇದರಿಂದ ಸಿಟ್ಟಿಗೆದ್ದ ಪ್ರವೀಣ್ ನೇರವಾಗಿ ಆಕೆಯ ನೇಜಾರಿನ ಮನೆಗೆ ಬಂದು ಚೂರಿಯಿಂದ ಆಕೆಯನ್ನು ಹತ್ಯೆ ಮಾಡಿದ್ದಾನೆ ನಾಲ್ವರನ್ನು ಹತ್ಯೆಗೈದ ಹಂತಕನು ಧರಿಸಿದ್ದ ಅಂಗಿಯನ್ನು ಬದಲಾಯಿಸಿ ಯಾರಿಗೂ ಅನುಮಾನ ಬಾರದಂತೆ ಕುಡುಚಿಯ ತನ್ನ ಮನೆಯನ್ನು ಸೇರಿದ್ದಾನೆ ಮನೆಯಲ್ಲಿದ್ದ ತನ್ನ ಮಡದಿಗೆ ಮೂರು ದಿನ ರಜೆ ಇದೆ ತಿಳಿಸಿ ಕಾರಿನಲ್ಲಿ ಸಾಂಗ್ಲಿಗೆ ಪ್ರಯಾಣ ಬೆಳೆಸಿದ್ದ ಎನ್ನಲಾಗಿದೆ