ಮಂಗಳೂರು : ಸುರತ್ಕಲ್ನ ರಾಷ್ಟ್ರ ಭಕ್ತ ನಾಗರಿಕ ವೇದಿಕೆ ವತಿಯಿಂದ ಜು. 26ರಂದು ನಡೆಯುವ ಕಾರ್ಗಿಲ್ ವಿಜಯ ದಿವಸ್ ಕಾರ್ಯ ಕ್ರಮದಲ್ಲಿ 5 ಲಕ್ಷ ರೂ. ಸೈನಿಕ ಕಲ್ಯಾಣ ನಿಧಿ ವಿತರಿಸಲಾಗುವುದು. ಮಾಜಿ ಸೈನಿಕರಾದ ಲೀಲಾಧರ ಕಡಂಬೋಡಿ ಹಾಗೂ ಪ್ರವೀಣ್ ಶೆಟ್ಟಿ ಕುಂಪಲ ಅವರನ್ನು ಗೌರವಿಸ ಲಾಗುವುದು. ಸೇನಾ ಮೆಡಲ್ ಪುರಸ್ಕೃತ ಕರ್ನಲ್ ರಾಜೇಶ್ ಹೊಳ್ಳ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಕೃಷ್ಣಜೆ.ಪಾಲೆಮಾರ್ ಮುಖ್ಯ ಅತಿಥಿಯಾಗಿರುವರು. ಸಂಜೆ 6.30 ಕ್ಕೆ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹಣತೆ ಮೆರವಣಿಗೆ ನಡೆಯಲಿದೆ. ಭಾಷಣ ಮತ್ತು ಪ್ರಬಂಧ ಸ್ಪರ್ಧೆ ನಡೆಸಲಾಗಿದೆ ಎಂದು ಸತ್ಯಜಿತ್ ಸುರತ್ಕಲ್ ಹೇಳಿದರು. ಉಪಾಧ್ಯಕ್ಷ ಶ್ರೀಕಾಂತ್ ಶೆಟ್ಟಿ ಬಾಳ, ಮಂಗಳೂರು ಘಟಕದ ಅಧ್ಯಕ್ಷೆ ಪ್ರಭಾ . ಕಾಮತ್, ಪ್ರಧಾನಕಾರ್ಯದರ್ಶಿ ಸಂದೀಪ್, ಅಣ್ಣಪ್ಪ ದೇವಾಡಿಗ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.