ಕುಂದಾಪುರ : ಕಳೆದ 2-3 ದಿನಗಳಿಂದ ಕುಂದಾಪುರ ಪುರಸಭೆಯಿಂದ ಸರಬರಾಜಾಗುತ್ತಿರುವ ನೀರು ಉಪ್ಪಾಗಿದ್ದು ಹಾಗೂ ಕೆಲವು ಕಡೆ ವಾಸನೆಯಿಂದ ಕೂಡಿದ್ದು ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಶಾಸಕ ಕಿರಣ್ ಕೊಡ್ಗಿಯವರು ಪುರಸಭಾ ಅಧಿಕಾರಿಗಳ ಸಭೆ ಕರೆದು ತಕ್ಷಣವೇ ಅದನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು
ಪ್ರತಿನಿತ್ಯ ಪುರಸಭೆಗೆ ತಮ್ಮ ಅಹವಾಲು ಸಲ್ಲಿಸಲು ಬರುವ ಜನರಿಗೆ ಯಾವುದೇ ತೊಂದರೆ ನೀಡದೇ ಕೆಲಸ ನಿರ್ವಹಿಸುವುದು ಸಿಬ್ಬಂದಿಗಳ ಹೊಣೆಗಾರಿಕೆಯಾಗಿದ್ದು ಎಲ್ಲರೊಂದಿಗೂ ಸೌಜನ್ಯದಿಂದ ವರ್ತಿಸಿ ಉತ್ತಮ ರೀತಿಯ ಆಡಳಿತ ನೀಡಬೇಕೇಂದು ಸಲಹೆ ನೀಡಿದರು
ಸಭೆಯಲ್ಲಿ ಉಪ ವಿಭಾಗಾಧಿಕಾರಿ ರಶ್ಮಿ ಎಸ್ ಆರ್ ಮುಖ್ಯಾಧಿಕಾರಿ ಮಂಜುನಾಥ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು