ಕುಂದಾಪುರ : ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಂಗೊಳ್ಳಿಯ ನೆಲಮಹಡಿ ವೆಂಕಟೇಶ ಕೃಪಾ ರಥಬೀದಿ ಎದುರು ಮುಖ್ಯ ರಸ್ತೆಯಲ್ಲಿರುವ ಕರ್ಣಾಟಕ ಬ್ಯಾಂಕ್ ಗಂಗೊಳ್ಳಿಯಲ್ಲಿ 949ನೆ ಶಾಖೆ ಮತ್ತು ಮಿನಿ ಇ–ಲಾಬಿ ಉದ್ಘಾಟನಾ ಸಮಾರಂಭದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿಯವರು ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿಯವರು ಭಾಗವಹಿಸಿ ಸಂಸ್ಥೆಗೆ ಶುಭ ಹಾರೈಸಿದರು. ಶಾಖೆ ಮತ್ತು ಮಿನಿ ಇ ಲಾಬಿ ಉದ್ಘಾಟನೆಯನ್ನು ಎಚ್. ಗಣೇಶ್ ಕಾಮತ್ ಕೈಗಾರಿಕೋ ಉದ್ಯಮಿ ಗಂಗೊಳ್ಳಿ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿನಯ್ ಭಟ್ ಬ್ಯಾಂಕಿನ ಜನರಲ್ ಮ್ಯಾನೇಜರ್ ವಹಿಸಿದರು. ಈ ಸಂದರ್ಭದಲ್ಲಿ ಸಮಿತ್ ಭಾಸ್ಕರ್ ಬ್ಯಾಂಕ್ ಮ್ಯಾನೇಜರ್, ವಾದಿರಾಜ.ಕೆ. ಅಸಿಸ್ಟೆಂಟ್ ಮ್ಯಾನೇಜರ್, ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗದವರು, ಪ್ರಮುಖರು ಉಪಸ್ಥಿತರಿದ್ದರು.