Home » ಸಾಮಾಜಿಕ ಜಾಲತಾಣದಿಂದ ಸುರಕ್ಷಿತ ಅಂತರದಲ್ಲಿರಿ
 

ಸಾಮಾಜಿಕ ಜಾಲತಾಣದಿಂದ ಸುರಕ್ಷಿತ ಅಂತರದಲ್ಲಿರಿ

ಕೆಪಿಎಸ್ ಕೊಟೇಶ್ವರ ಪ್ರತಿಭಾ ಪುರಸ್ಕಾರ

by Kundapur Xpress
Spread the love

ಕೋಟೇಶ್ವರ : ಇಂದು ಬದುಕಿನ ಬಹುಭಾಗವನ್ನು ಅತಿಕ್ರಮಿಸಿರುವ ಸಾಮಾಜಿಕ ಜಾಲತಾಣ ಸಮಾಜದ ನೆಮ್ಮದಿಯನ್ನೇ ಕಲಕುವ ಮಟ್ಟಿಗೆ ಬೆಳೆದು ಬಿಟ್ಟಿದೆ.ಅದೊಂದು ವ್ಯಸನವಾಗಿ ವಿದ್ಯಾರ್ಥಿಗಳ ಬದುಕನ್ನು ಮುರಾಬಟ್ಟೆಯನ್ನಾಗಿಸಿದೆ.ಅದರಿಂದ ಸುರಕ್ಷಿತ ಅಂತರ ಕಾಪಾಡಿಕೊಂಡು ಮೌಲ್ಯಯುತ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುವ ತುರ್ತು ಅಗತ್ಯತೆ ಇದೆ.ಇದಕ್ಕೆ ಸಮಾಜದ ಮಾರ್ಗದರ್ಶಕ ಸ್ಥಾನದಲ್ಲಿರುವ ಶಿಕ್ಷಕರ ಪಾತ್ರ ಬಹು ಹಿರಿದು ಎಂದು ಬಾರ್ಕೂರಿನ ರುಕ್ಮಿಡಿ ಶೆಡ್ತಿ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಪ್ರತಿಪಾದಿಸಿದರು.
ಅವರು ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರದ ಪ್ರೌಢ ಶಾಲಾ ವಿಭಾಗದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸ್ಥಳೀಯ ಪಂಚಾಯತ್ ಅಧ್ಯಕ್ಷರಾದ ರಾಗಿಣಿ ದೇವಾಡಿಗರವರು ಮಾತನಾಡಿ ಸಂಸ್ಥೆಯ ಪ್ರಗತಿಪರ ಬೆಳವಣಿಗೆಯನ್ನು ಶ್ಲಾಘಿಸಿದರು

ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ದತ್ತಿ ಬಹುಮಾನ ಪಟ್ಟಿಯನ್ನು ಶಿಕ್ಷಕಿ ಜಯಶ್ರೀರವರು,ಸಾಂಸ್ಕೃತಿಕ ಸ್ಪರ್ಧಾ ವಿಜೇತರ ಪಟ್ಟಿಯನ್ನು ಸುಧಾಬಾಯಿ ನಾಯಕ್ ಮತ್ತು ಶ್ರೀಮತಿ ಅನುರಾಧ, ಕ್ರೀಡಾ ವಿಜೇತರ ಪಟ್ಟಿಯನ್ನು ದೈಹಿಕ ಶಿಕ್ಷಣ ಶಿಕ್ಷಕರು ಮಂಜುನಾಥ್ ಹೊಳ್ಳ ಹಾಗೂ ಉದಯ ಮಡಿವಾಳ ಎಂ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರತಿಭಾನ್ವಿತರ ಪಟ್ಟಿಯನ್ನು ಶ್ರೀಕಾಂತ್, ಹಿಂದಿನ ವರ್ಷದ ಕಲಿಕೆಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳ ಪಟ್ಟಿಯನ್ನು ಶ್ರೀಮತಿ ರೇಷ್ಮಾ ಕುಮಾರಿ ಮತ್ತು ಈ ವರ್ಷದ ಕಲಿಕಾ ಸಾಧಕರ ಪಟ್ಟಿಯನ್ನು ಶ್ರೀ ಭಾಷಾ ಹಾಸನ್ ಸಾಬ್ ಇವರು ವಾಚಿಸಿದರು. ಕೆಪಿಎಸ್ ಕೋಟೇಶ್ವರ ಕಾಲೇಜಿನ ಪ್ರಾಂಶುಪಾಲ ಪ್ರಕಾಶ ಶೆಟ್ಟಿ,ಸಂಸ್ಥೆಯ ನಿವೃತ್ತ ಚಿತ್ರ ಕಲಾ ಅಧ್ಯಾಪಕ ಡಾ.ರಾಧಾಕೃಷ್ಣ ಉಪಾಧ್ಯಾಯರವರು ಉಪಸ್ಥಿತರಿದ್ದರು. ಉಪಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕಿ ಸುಚೇತಾ ಭಟ್ ಸರ್ವರನ್ನು ಸ್ವಾಗತಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕಿ ಪೀತಾಂಬರಿರವರು ವಂದಿಸಿದರು. ಅಧ್ಯಾಪಕ ರಮಾನಂದ ನಾಯಕ್ ಹಾಗೂ ನಾಗರತ್ನರವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪೂರ್ಣಿಮಾ ಮತ್ತು ದಿವ್ಯಪ್ರಭ ರವರು ಸಾಂಸ್ಕೃತಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಉದಯ್ ಮಡಿವಾಳ ಎಂ ಮತ್ತು ನಾಟಕ ಶಿಕ್ಷಕ ವಾಸುದೇವ್ ಗಂಗೇರ್ ಅವರು ಕಾರ್ಯಕ್ರಮ ಸಂಘಟನೆಗೆ ಸಹಕರಿಸಿದರು.

 

Related Articles

error: Content is protected !!