Home » ಬಿಲ್ಲವ ಸಂಘಟನೆ ವತಿಯಿಂದ ಸಂಸದರಿಗೆ ಅಭಿನಂದನೆ
 

ಬಿಲ್ಲವ ಸಂಘಟನೆ ವತಿಯಿಂದ ಸಂಸದರಿಗೆ ಅಭಿನಂದನೆ

by Kundapur Xpress
Spread the love

ಕೋಟ : ಶ್ರೀ ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘ ಸಾಸ್ತಾನ,ಬಿಲ್ಲವ ಯುವ ವೇದಿಕೆ ಪಾಂಡೇಶ್ವರ ಮೂಡಹಡು ಇವರ ಜಂಟಿ ಆಶ್ರಯದಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ನೂನತ ಸಂಸದರಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ಅಭಿನಂದನಾ ಕಾರ್ಯಕ್ರಮ ಭಾನುವಾರ. ಶ್ರೀ ಬ್ರಹ್ಮಬೈದರ್ಕಳ ಗೋಳಿಗರಡಿ ದೈವಸ್ಥಾನದ ಸಭಾಂಗಣದಲ್ಲಿ ಜರಗಿತು.
ಇದೇ ವೇಳೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಸಮುದಾಯ ಹಾಗೂ ಗ್ರಾಮಸ್ಥರ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಅವರು ಒರ್ವ ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಅಭ್ಯರ್ಥಿಯನ್ನಾಗಿಸಿದೆ ಆದರೆ ಅದೇ ಜನ ಗೆಲ್ಲಿಸಿ ಆಶ್ರೀವದಿಸಿದ್ದಾರೆ ಇದು ಜನ ಸೇವೆಗೆ ದೇಶದ ಅಭಿವೃದ್ಧಿಗೆ ನೀಡಿದ ಗೌರವ ಈ ನಿಟ್ಟಿನಲ್ಲಿ ಸಮುದಾಯ ಮತ್ತು ಗ್ರಾಮಸ್ಥರ ಅಭಿನಂದನೆಯನ್ನು ವಿನಯತೆಯಿಂದ ಸ್ವೀಕರಿಸುವ ಭಾಗ್ಯ ದೊರೆತ್ತಿರುವುದು ನನ್ನ ಸೌಭಾಗ್ಯ,ರಾಜ್ಯ ಸರಕಾರದ ಸಚಿವನಾಗಿ ,ವಿಪಕ್ಷ ನಾಯಕನಾಗಿ ಸಮರ್ಥವಾಗಿ ನಿಭಾಯಿಸಿದ ಹೆಮ್ಮೆ ಇದೆ ಅದೇ ರೀತಿ ಸಂಸದರನ್ನಾಗಿ ದೊಡ್ಡ ಅಂತರದಲ್ಲಿ ಆಯ್ಕೆ ಮಾಡಿದ್ದಿರಿ ಸಮಾಜದ ಅಭಿವೃದ್ಧಿಗೆ ಬೇಕಾದ ಕಾರ್ಯವನ್ನು ನಿಷ್ಠೆಯಿಂದ ಮಾಡುತ್ತೇನೆ ಈ ಮೂಲಕ ಕರ್ನಾಟಕದ ಕೀರ್ತಿಯನ್ನು ಎತ್ತಿ ಹಿಡಿಯುತ್ತೇನೆ ನಾಳೆ ಪ್ರಮಾಣವಚನದಲ್ಲಿ ಕನ್ನಡದಲ್ಲೆ ಪ್ರತಿಜ್ಞೆ ಸ್ವೀಕರಿಸುತ್ತೇನೆ
ಸಭೆಯ ಅಧ್ಯಕ್ಷತೆಯನ್ನು ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘ ಸಾಸ್ತಾನ ಅಧ್ಯಕ್ಷ ಎಂ.ಸಿ ಚಂದ್ರಶೇಖರ್ ವಹಿಸಿದ್ದರು.
ಕ.ಸಾ.ಪ ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ ಅಭಿನಂದನಾನುಡಿಗಳನ್ನಾಡಿ ರಾಜ್ಯವೇ ಕಂಡ ಸರಳ ಸಜ್ಜನಿಕೆಯ ರಾಜಕಾರಣಿ ಕೋಟ ಆಗಿದ್ದಾರೆ,ಅವರ ಕಾರ್ಯವೈಕರಿ ಅಸಾಮಾನ್ಯವಾದದ್ದು ಕೋಟದ ಹೆಸರನ್ನು ಶಿವರಾಮ ಕಾರಂತರ ನಂತರ ತನ್ನ ಹೆಸರಲ್ಲಿ ಪರಿಚಯಿಸಿಕೊಂಡಿದ್ದಾರೆ ,ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ಟೊಂಕಕಟ್ಟಿ ಶ್ರಮಿಸಿದವರು.ಒರ್ವ ಹಳ್ಳಿ ಹುಡುಗ ದಿಲ್ಲಿಯವರೆಗೆ ರಾಜಕಾರಣದ ರಾಜ್ಯಭಾರ ಮಾಡುತ್ತಾನೆ ಎಂದರೆ ಅದು ಕೋಟ ಶ್ರೀನಿವಾಸ ಪೂಜಾರಿಯವರಿಗೆ ದಕ್ಕಬೇಕಾದದ್ದು ಎಂದು ಅಭಿನಂದನಾ ನುಡಿಯಲ್ಲಿ ತಿಳಿಸಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್ ಕೋಟ ಶುಭಾಶಂಸನೆಗೈದರು.
ಮುಖ್ಯ ಅಭ್ಯಾಗತರಾಗಿ ಬ್ರಹ್ಮಬೈದರ್ಕಳ ಶ್ರೀ ಗೋಳಿಗರಡಿ ದೈವಸ್ಥಾನದ ಅಧ್ಯಕ್ಷ ಜಿ.ವಿಠ್ಠಲ್ ಪೂಜಾರಿ, ಪಾಂಡೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಸುಶೀಲ ಸದಾನಂದ ಪೂಜಾರಿ,ಬ್ರಹ್ಮಬೈದರ್ಕಳ ಬಿಲ್ಲವ ಮಹಿಳಾ ಸಂಘದ ಕಾರ್ಯದರ್ಶಿ ಲೀಲಾವತಿ ಗಂಗಾಧರ್,ಉದ್ಯಮಿ ಪಂಜು ಪೂಜಾರಿ ಬೆಂಗಳೂರು, ಬ್ರಹ್ಮಬೈದರ್ಕಳ ಗೋಳಿಗರಡಿ ಪಾತ್ರಿಗಳಾದ ಶಂಕರ್ ಪೂಜಾರಿ,ಬಿಲ್ಲವ ಸಂಘದ ಗ್ರಾಮಸಮಿತಿಯ ಅಧ್ಯಕ್ಷರಾದ ರಾಜು ಪೂಜಾರಿ ಮೂಡಹಡು,ಪಾಂಡೇಶ್ವರ ಭಾಗದ ಅಧ್ಯಕ್ಷ ಸುರೇಶ್ ಪೂಜಾರಿ,ಬಾಳ್ಕುದ್ರು ಸಮಿತಿ ಅಧ್ಯಕ್ಷ ವಿಜಯ್ ಪೂಜಾರಿ,ಐರೋಡಿ ಗ್ರಾಮದ ಅಧ್ಯಕ್ಷ ಸುಧಾಕರ್ ಪೂಜಾರಿ,ಗುಂಡ್ಮಿ ಭಾಗದ ಅಧ್ಯಕ್ಷ ಸುರೇಶ್ ಪೂಜಾರಿ ಸಂಬೋಡ್ಲು,ಬಿಲ್ಲವ ಯುವ ವೇದಿಕೆ ಪಾಂಡೇಶ್ವರ ಅಧ್ಯಕ್ಷ ರವಿಕಿರಣ್ ಪೂಜಾರಿ ಉಪಸ್ಥಿತರಿದ್ದರು.ಬ್ರಹ್ಮಬೈದರ್ಕಳ ಬಿಲ್ಲವ ಸಂಘ ಪ್ರಧಾನಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಶಿಕ್ಷಕ ಸತೀಶ್ ವಡ್ಡರ್ಸೆ ನಿರೂಪಿಸಿದರು.ಬ್ರಹ್ಮಬೈದರ್ಕಳ ಬಿಲ್ಲವ ಸಂಘದ ಜತೆಕಾರ್ಯದರ್ಶಿ ಚಂದ್ರಮೋಹನ್ ಪೂಜಾರಿ ವಂದಿಸಿದರು.

   

Related Articles

error: Content is protected !!