Home » ಸಂಗೀತದಿಂದ ಸ್ವಸ್ಥ ಸಮಾಜ ನಿರ್ಮಾಣ
 

ಸಂಗೀತದಿಂದ ಸ್ವಸ್ಥ ಸಮಾಜ ನಿರ್ಮಾಣ

: ವಸಂತ ಗಳಿಯಾರ್

by Kundapur Xpress
Spread the love

ಕುಂದಾಪುರ: ಸಂಗೀತ ಹೇಳಿ ಅನುಭವಿಸುವುದಕ್ಕಿಂತಲೂ ಸಂಗೀತ ಕೇಳಿ ಅನುಭವಿಸುವುದರಲ್ಲಿ ಹೆಚ್ಚಿನ ಸುಖವಿದೆ. ಸಂಗೀತ ಅಂದರೆ ಅದು ಬರಿ ಹಾಡು ಆಗಿರಬೇಕು ಅಂತೇನಿಲ್ಲ. ಪ್ರತಿಯೊಂದು ಪ್ರಾಣಿ, ಪಕ್ಷಿಗಳಲ್ಲಿ, ವಸ್ತುವಿನಲ್ಲಿ ಸಂಗೀತವಿದೆ. ಬೆಳಿಗ್ಗೆ ಎದ್ದಾಗ ಹಕ್ಕಿಗಳ ಕೂಗು, ಪ್ರಾಣಿಗಳ ಕೂಗು, ಗಿಡ ಮರಗಳ ಸದ್ದು, ನೀರು ಹರಿಯುವ ಸದ್ದು ಹೀಗೆ ಎಲ್ಲದರಲ್ಲಿಯೂ ಒಂದೊಂದು ರೀತಿಯ ಸಂಗೀತ ಹೊರ ಹೊಮ್ಮುತ್ತದೆ. ಸಂಗೀತ ಮನಸ್ಸಿಗೆ, ದೇಹಕ್ಕೆ ಅಮೂಲ್ಯ ಚೈತನ್ಯ, ನವೋಲ್ಲಾಸ ನೀಡುವ ಸಾಧನವಾಗಿದೆ. ಸಂಗೀತ ಹೇಳುವ ಮತ್ತು ಕೇಳುವ ಹವ್ಯಾಸದಿಂದ ಆರೋಗ್ಯ ಮತ್ತು ಆಯಸ್ಸು ವೃದ್ದಿಯಾಗುವುದರ ಜೊತೆಗೆ ಒಂದು ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ ಎಂದು ಜನಸೇವಾ ಟ್ರಸ್ಟ್ ಅಧ್ಯಕ್ಷ ವಸಂತ ಗಿಳಿಯಾರ್ ವಿಶ್ವ ಸಂಗೀತ ದಿನಾಚರಣೆಯ ಅಂಗವಾಗಿ ಕಲಾಕ್ಷೇತ್ರದ ಪ್ರಕಾಶಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್, ಸಾಮಾಜಿಕ ಹೋರಾಟಗಾರ ಸೋಮಶೇಖರ ಶೆಟ್ಟಿ ಕೆಂಚನೂರು, ಕುಸುಮಾಕರ ಶೆಟ್ಟಿ, ಉದ್ಯಮಿ ಸನತ್ ಕುಮಾರ್ ರೈ ಉಪಸ್ಥಿತರಿದ್ದರು. ಪ್ರಾಪ್ತಿ ಹೆಗ್ಡೆ ಮತ್ತು ಕಮಲ್ ಕುಂದಾಪುರ ಚಲನಚಿತ್ರ ಗೀತೆಗಳನ್ನು ಹಾಡಿ ನೆರೆದವರನ್ನು ರಂಜಿಸಿದರು.

   

Related Articles

error: Content is protected !!