Home » ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ
 

ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

ಪೂರ್ವಭಾವಿ ಸಭೆ

by Kundapur Xpress
Spread the love

ಕುಂದಾಪ್ರ : ಆಗಸ್ಟ್ 4 ರಂದು ನಡೆಯುವ ಕರ್ಕಾಟಕ ಅಮಾವಾಸ್ಯೆ ದಿನದಂದು, ಪ್ರತಿ ವರ್ಷ ನಡೆಯುವಂತೆ ಈ ವರ್ಷವು ಕೂಡಾ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ನಡೆಯಲಿದೆ.

ಅದರೊಂದಿಗೆ ತೆರೆಯ ಮರೆಗೆ ಸರಿದ ಕುಂದಾಪುರ ಭಾಗದ ಗ್ರಾಮ್ಯ ಕ್ರೀಡೆಗಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಗ್ರಾಮೀಣ ಕ್ರೀಡಾಕೂಟವನ್ನು ಜರುಗಿಸುವ ಯೋಜನೆಯನ್ನು ಹೊಂದಲಾಗಿದೆ.

ಮೇಲಿನ ಈ ಎರಡು ಕಾರ್ಯಕ್ರಮಗಳ ರೂಪುರೇಷೆಗಳನ್ನು ನಿರ್ಧರಿಸಲು ಮತ್ತು ಅದ್ದೂರಿಯ ತಯಾರಿ ನಡೆಸಲು ಜೂನ್ 17 ರಂದು ಸೋಮವಾರ ಸಂಜೆ 5.00ಕ್ಕೆ ಕುಂದಾಪುರ AVN ಬಿಲ್ಡಿಂಗ್ ನ (ಹೊಟೇಲ್ ಡಿಪ್ಲೋಮೆಟ ಸಮೀಪ) ಕಲಾಕ್ಷೇತ್ರ ಕುಂದಾಪುರ ಟ್ರಸ್ಟ ಕಚೇರಿಯಲ್ಲಿ ಸಭೆ ಕರೆಯಲಾಗಿದೆ.

ಈ ಸಭೆಯಲ್ಲಿ ಕುಂದಾಪ್ರ ಕನ್ನಡ ಮಾತನಾಡುವ ತಾಲೂಕುಗಳಾದ ಬೈಂದೂರು, ಕುಂದಾಪುರ, ಬ್ರಹ್ಮಾವರ, ಮತ್ತು ಹೆಬ್ರಿ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಯುವಕ, ಯುವತಿ ಮಂಡಲಗಳ ಅಧ್ಯಕ್ಷರು ಸಭೆಯಲ್ಲಿ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡುವಂತೆ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಇದರ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ  ಮಾಹಿತಿಗಾಗಿ 98447 83053 ಸಂಪರ್ಕಿಸಬಹುದಾಗಿದೆ

 

Related Articles

error: Content is protected !!