Home » ಕಲಾಕ್ಷೇತ್ರದಿಂದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ
 

ಕಲಾಕ್ಷೇತ್ರದಿಂದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

by Kundapur Xpress
Spread the love

ಕುಂದಾಪುರ : ಆಗಸ್ಟ್ ೪ ರಂದು ಆಸಾಡಿ ಅಮಾಸೆಯಂದು ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯು ಕುಂದಾಪುರದ ಬೋರ್ಡ್ ಹೈಸ್ಕೂಲಿನ ಕಲಾ ಮಂದಿರದಲ್ಲಿ ಸಂಜೆ 3.30 ಕ್ಕೆ ಪ್ರಾರಂಭವಾಗಲಿದೆ.
ಕುAದಾಪುರ ವಿಧಾನಸಭಾ ಸದಸ್ಯರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿಯವರು ಸಭಾಧ್ಯಕ್ಷತೆ ವಹಿಸಲಿದ್ದು, ಉದ್ಘಾಟನೆಯನ್ನು ಕುಂದಾಪ್ರ ಕನ್ನಡದ ವಾಗ್ಮಿ ಶ್ರೀ ಮನು ಹಂದಾಡಿಯವರು ಮಾಡಲಿಕ್ಕಿದ್ದಾರೆ. ಮುಖ್ಯ ಅತಿಥಿಯಾಗಿ ರಂಗ ಕಲಾವಿದ, ಚಲನಚಿತ್ರ ನಟ ಶ್ರೀ ರಘು ಪಾಂಡೇಶ್ವರ ಭಾಗವಹಿಸಲಿದ್ದಾರೆ. ಮನೋರಂಜನಾ ಕಾರ್ಯಕ್ರಮವಾಗಿ ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷರಾದ ಡಾ. ಗಣೇಶ್ ಗಂಗೊಳ್ಳಿ ಮತ್ತು ತಂಡದವರಿAದ ಕುಂದಾಪ್ರ ಕನ್ನಡ ಜಾನಪದ ಗೀತೆಯ ರಸಮಂಜರಿ ಹಾಗೂ ಕುಂದಾಪುರದ ಕುಳ್ಳಪ್ಪು ತಂಡದವರಿಂದ “ಗಿರಾಕಿಯೇ ಇಲ್ಲಾ ಮಾರಾಯಾ” ಎಂಬ ನಗೆ ನಾಟಕವನ್ನು ಪ್ರದರ್ಶಿಸಲಿದ್ದಾರೆ.
ಆಗಮಿಸಿದವರೆಲ್ಲರಿಗೂ ಬಿಸಿಬಿಸಿ ಹಲಸಿನ ಹಪ್ಪಳ ಹಾಗೂ ಕಾಳು ಮೆಣಸಿನ ಬಿಸಿಬಿಸಿ ಪಾನಕದ ವ್ಯವಸ್ಥೆ ಮಾಡಲಾಗಿದೆ. ಕುಂದಾಪುರ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

   

Related Articles

error: Content is protected !!