ಕುಂದಾಪುರ : ನಗರದ ಜೂನಿಯರ್ ಕಾಲೇಜಿನ ಆವರಣದಲ್ಲಿ ನಿನ್ನೆ ಭಾನುವಾರ ಸಂಜೆ ಕಲಾಕ್ಷೇತ್ರ ಸಂಸ್ಥೆ ಆಯೋಜಿಸಿದ್ದ ಇನಿದನಿ ಹಳೆಯ ಚಲನ ಚಿತ್ರ ಗೀತೆಗಳ ಕಾರ್ಯಕ್ರಮ ನೆರವೇರಿತು 13ನೇ ವರ್ಷದ ಕಾರ್ಯಕ್ರಮದಲ್ಲಿ ಕಲಾವಿದರ ಕಂಠದಿಂದ ಹೊರಹೊಮ್ಮಿದ ಹಳೆಯ ಮಧುರ ಹಾಡುಗಳು ಜನಮನ ಸೊರೆಗೊಂಡಿತು ಸಾವಿರಾರು ಜನ ಸಂಗೀತ ಪ್ರಿಯರು ಸಂಗೀತದ ಭಾವ ಲೋಕದಲ್ಲಿ ತೇಲಾಡಿದರು
ಮುಖ್ಯ ಅತಿಥಿಯಾಗಿ ಆಗಮಸಿದ ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು ಮಾತನಾಡಿ ಇನದನಿ ಕಾರ್ಯಕ್ರಮವು ಕುಂದಾಪುರದ ಹೆಮ್ಮೆ ಎಂದು ಬಣ್ಣಿಸಿ ಶುಭ ಹಾರೈಸಿದರು ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷ ಬಿ.ಕಿಶೋರ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿ ರಾಜೇಶ್ ಕಾವೇರಿ ವಂದಿಸಿದರು ಇದೇ ಸಂದರ್ಭದಲ್ಲಿ ಕಲಾವಿದರನ್ನು ಸನ್ಮಾನಿಸಲಾಯಿತು