ಕೋಟ : ಸಂಘಟನೆಗಳಿಂದ ಕಲಾರಾಧನೆ ಹಾಗೂ ಕಲಾವಿದರ ಗುರುತಿಸು ಕಾಯಕ ಅತ್ಯಂತ ಶ್ಲಾಘನೀಯ ಎಂದು ಉದ್ಯಮಿ ಕಿದಿಯೂರು ಉದಯ್ ಕುಮಾರ್ ಶೆಟ್ಟಿ ನುಡಿದರು. ಶನಿವಾರ ಅಘೋರೇಶ್ವರ ದೇಗುಲದ ವಠಾರದಲ್ಲಿ ಅಘೋರೇಶ್ವರ ಕಲಾರಂಗ ಕಾರ್ತಟ್ಟು ಚಿತ್ರಪಾಡಿ ಇವರ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಂಘ ಸಂಸ್ಥೆಗಳು ಸಮಾಜಮುಖಿ ಕೆಲಸ ನಿರ್ವಹಿಸುವುದರ ಜತೆಗೆ ಭಾಷಾಭಿಮಾನ ಹೆಚ್ಚಿಸುವ ಕಾರ್ಯಕ್ರಮಗಳು ನಿತ್ಯನಿರಂತರವಾಗಿ ನಡೆಯಲಿ ಎಂದು ಹಾರೈಸಿದರು ಇದೇ ವೇಳೆ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿಯನ್ನು ಹಿರಿಯ ಯಕ್ಷಕಲಾವಿದ ಹಳ್ಳಾಡಿ ಕೃಷ್ಣ ನಾಯ್ಕ್ ಇವರಿಗೆ ಯಕ್ಷ ಚಿಂತಕ ಪ್ರೋ ಎಸ್.ವಿ ಉದಯ್ ಕುಮಾರ್ ಶೆಟ್ಟಿ ಪ್ರದಾನಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಘೋರೇಶ್ವರ ಕಲಾರಂಗದ ಅಧ್ಯಕ್ಷ ಉಮೇಶ್ ನಾಯರಿ ವಹಿಸಿದ್ದರು. ಕ್ರೀಡಾ ಸಾಧಕಿ ತೃಪ್ತಿ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ ತಾರಾನಾಥ ಹೊಳ್ಳ ಅಭಿನಂದಿಸಲಾಯಿತು.. ಮುಖ್ಯ ಅಭ್ಯಾಗತರಾಗಿ ಅಘೋರೇಶ್ವರ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಚಂದ್ರಶೇಖರ್ ಕಾರಂತ್,ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಕನ್ಯಾ ಜಗದೀಶ್ ಶೆಟ್ಟಿ,ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್,ಕುAದಾಪುರ ನ್ಯಾಯವಾದಿ ಬನ್ನಾಡಿ ಸೋಮನಾಥ ಹೆಗ್ಡೆ,ರೋಟರಿ ಕ್ಲಬ್ ಕೋಟ ಸಿಟಿ ಅಧ್ಯಕ್ಷ ಅನಿಲ್ ಸುವರ್ಣ,ರೋಟರಿ ವಲಯ ಸೇನಾನಿ ನಿತ್ಯಾನಂದ ನಾಯರಿ,ಜಯಕರ್ನಾಟಕ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ, ಗಾಣಿಗ ಯುವ ಸಂಘಟನೆ ಕೋಟ ಅಧ್ಯಕ್ಷ ಗಿರೀಶ್ ಗಾಣಿಗ, ಮತ್ತಿತರರು ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಪ್ರಭಾಕರ ನಾಯರಿ ಪ್ರಾಸ್ತಾವನೆ ಸಲ್ಲಿಸಿದರು. ಸಂಘಟನೆಯ ಪ್ರಮುಖರಾದ ವಿಶ್ವನಾಥ್ ಗಾಣಿಗ ಸ್ವಾಗತಿಸಿದರು. ಸನ್ಮಾನಪತ್ರವನ್ನು ಸದಸ್ಯ ರವಿ ಬನ್ನಾಡಿ ವಾಚಿಸಿದರು.ಕಾರ್ಯಕ್ರಮವನ್ನು ನಾಗೇಂದ್ರ ಆಚಾರ್ ನಿರೂಪಿಸಿದರು.ಕಲಾರಂಗದ ಕೋಶಾಧಿಕಾರಿ ರೇವತಿ.ಎಸ್.ನಾಯರಿ ವಂದಿಸಿದರು.ರಾಧಕೃಷ್ಣ ಬ್ರಹ್ಮಾವರ,ನವೀನ್ ನಾಯರಿ ಸಹಕರಿಸಿದರು.