ಉಪ್ರಳ್ಳಿ : ಶ್ರೀ ಕಾಳಿಕಾಂಬಾ ಎಜುಕೇಶನ್ ಟ್ರಸ್ಟ್( ರಿ ) ಉಪ್ರಳ್ಳಿ ಇದರ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದ ಪೂರ್ವಭಾವಿ ಸಭೆ ಹಾಗೂ ಮುಂದಿನ ಅವಧಿಯ ಆಡಳಿತ ಮಂಡಳಿ ಆಯ್ಕೆಯು ಟ್ರಸ್ಟಿನ ಅಧ್ಯಕ್ಷರಾದ ಯು ಕೆ ಎಸ್ ಸೀತಾರಾಮ ಆಚಾರ್ಯರ ಅಧ್ಯಕ್ಷತೆಯಲ್ಲಿ ಹಾಗೂ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕಳಿ ಚಂದ್ರಯ್ಯ ಆಚಾರ್ಯರ ಉಪಸ್ಥಿತಿಯಲ್ಲಿ ಉಪ್ರಳ್ಳಿಯ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಜರುಗಿತು ಮುಂದಿನ ಅವಧಿಯ ನೂತನ ಅಧ್ಯಕ್ಷರಾಗಿ ಸುಧಾಕರ ಆಚಾರ್ಯ ತ್ರಾಸಿ ಆಯ್ಕೆಯಾದರು
ಉಪಾಧ್ಯಕ್ಷರಾಗಿ ರವೀಂದ್ರ ಆಚಾರ್ಯ ಹಟ್ಟಿಯoಗಡಿ , ಕಾರ್ಯದರ್ಶಿಯಾಗಿ ಯಶೋಧರ ಆಚಾರ್ಯ ಕುಂಜ್ಞಾಡಿ ಕೋಶಾಧಿಕಾರಿಯಾಗಿ ಮಹೇಶ್ ಆಚಾರ್ಯ ಉಪ್ಪುಂದ, ಜೊತೆ ಕಾರ್ಯದರ್ಶಿಯಾಗಿ ಪ್ರಕಾಶ ಆಚಾರ್ಯ ಬಗ್ವಾಡಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಟ್ರಸ್ಟಿನ ಗೌರವ ಅಧ್ಯಕ್ಷರಾದ ಚಂದ್ರಯ್ಯ ಆಚಾರ್ಯ ಗುಡ್ಡೆಯಂಗಡಿ, ಸಿ ನಾರಾಯಣ ಆಚಾರ್ಯ ಕುಂದಾಪುರ, ಕ್ರಷ್ಣಯ್ಯ ಆಚಾರ್ಯ ಮರವಂತೆ, ಉದಯ ಆಚಾರ್ಯ ಕುಂದಾಪುರ, ಗುರುರಾಜ್ ಆಚಾರ್ಯ ಹಟ್ಟಿಯಂಗಡಿ ಹಾಗೂ ನೂತನ ಟ್ರಸ್ಟಿಗಳಾದ ಸುರೇಶ ಆಚಾರ್ಯ ಹಟ್ಟಿಯಂಗಡಿ ಕ್ರಾಸ್, ವಿಜೇಂದ್ರ ಆಚಾರ್ಯ ಕಟ್ಟಿನಮಕ್ಕಿ ಹಾಗೂ ದೇವಸ್ಥಾನದ ಮೆನೇಜರ್ ಮಹಾಬಲೇಶ್ವರ ಆಚಾರ್ಯ ಉಪಸ್ಥಿತರಿದ್ದರು.
ಸುಧಾಕರ ಆಚಾರ್ಯ ಸ್ವಾಗತಿಸಿ, ಮಹೇಶ್ ಆಚಾರ್ಯ ವಂದಿಸಿದರು.