185
ಉಡುಪಿ : ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಪರಿಸರದ ನಿವಾಸಿ, ದಿ! ಸೋಮಪ್ಪ ಮಾಬಿಯಾನ್ ಅವರ ಧರ್ಮಪತ್ನಿ ಜಲಜ ಪೂಜಾರ್ತಿ (87 ವರ್ಷ) ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಎಲ್ಲರ ಪ್ರೀತಿ ಪಾತ್ರರಾಗಿದ್ದ ಜಲಜ ಪೂಜಾರ್ತಿ ಅವರು ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಕೋಶಾಧಿಕಾರಿ ದಯಾನಂದ ಎ. ಸಹಿತ ನಾಲ್ವರು ಪುತ್ರರು, ಮೂವರು ಪುತ್ರಿಯರು ಹಾಗೂ ಬಂಧು ವರ್ಗವನ್ನು ಅಗಲಿದ್ದಾರೆ.

