ಕೋಟ : ಕಾರಂತರ ವ್ಯಕ್ತಿತ್ವ ಬಹು ವಿಶಿಷ್ಟವಾದದ್ದು ಅವರ ಸಾಹಿತ್ಯಿಕ ಬದುಕು ಮಾದರಿಯಾಗಿದೆ ಎಂದು ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಪ್ರವರ್ತಕ ಪ್ರದೀಪ್ ಕುಮಾರ್ ಕಲ್ಕೂರ ನುಡಿದರು. ಶನಿವಾರ ಸಾಲಿಗ್ರಾಮದ ಗಿರೀಜಾ ಸಭಾಂಗಣದಲ್ಲಿ ಗೆಳೆಯರ ಬಳಗ ಕಾರ್ಕಡ ಇದರ ವತಿಯಿಂದ ಡಾ.ಕೋಟ ಶಿವರಾಮ ಕಾರಂತ ಜನ್ಮದಿನಾಚರಣೆ ಅಂಗವಾಗಿ ಕಾರಂತ ಸಂಸ್ಮರಣೆ,ಗೆಳೆಯರ ಬಳಗ ಕಾರಂತ ಪುರಸ್ಕಾರ ಕಾರ್ಯಕ್ರಮದಲ್ಲಿ ಕಾರಂತರ ಭಾವಚಿತ್ರಕ್ಕೆ ಪುಷ್ಭನಮನಗೈದು ಮಾತನಾಡಿ ನಾಡು ಕಂಡ ಶ್ರೇಷ್ಠ ಸಾಹಿತಿಯಾಗಿ,ಕಲಾವಿದರಾಗಿ ಬಹುವಿಧಗಳಲ್ಲಿ ಕಾರಂತರು ಗುರುತಿಸಿಕೊಂಡವರು.ಕಾರಂತರ ಕ್ರೀಯಾಶೀಲತೆಯ ಬದುಕು ಎಲ್ಲರಿಗೂ ಮಾದರಿಯಾಗಿದೆ ಇಂತಹ ಸಾಹಿತಿಗಳ ಧ್ವನಿ ಆ ಸಂದರ್ಭದಲ್ಲಿ ಸಾಹಿತ್ಯಿಕ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಸೃಷ್ಟಿಯಾಗಿದೆ ಆದರೆ ಪ್ರಸ್ತುತ ಆಧುನಿಕ ಜಗತ್ತಿನ ಕಾಲಘಟ್ಟದಲ್ಲಿ ಸಾಹಿತ್ಯಿಕ ಧ್ಚನಿ ಕ್ಷೀಣಿಸಿದೆ, ಗೆಳೆಯರ ಬಳಗದಂತಹ ಸಂಘಟನೆಗಳು ಸಾಹಿತಿಗಳ ಬದುಕಿನ ಚಹರೆಯನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿರುವುದು ಅಭಿನಂದನೀಯ ಕಾರ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಇದೇ ವೇಳೆ ಗೆಳೆಯರ ಬಳಗ ಕಾರಂತ ಪುರಸ್ಕಾರವನ್ನು ಸಾಹಿತಿ ಡಾ.ನಾ.ಮೊಗಸಾಲೆ ಇವರಿಗೆ ಪ್ರದಾನಿಸಲಾಯಿತು. ಉಡುಪಿ ರತ್ನ ಪ್ರತಿಷ್ಠಾನ ಕೊಡವೂರು ಇದರ ಸಂಚಾಲಕಿ ಪೂಣ ðಮಾ ಜನಾರ್ದನ ಕೊಡವೂರ ಕಾರಂತರ ಸಂಸ್ಮರಣೆಗೈದರು. ಕಾರ್ಯಕ್ರಮವನ್ನು ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಛೇರಿಯ ಸಹಾಯಕ ಮಹಾಪ್ರಭಂಧಕ ವಾದಿರಾಜ್ ಕೆ ಉದ್ಘಾಟಿಸಿದರು. ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ,ಗೀತಾನಂದ ಫೌಂಡೇಶನ್ ಮಣೂರು ಪ್ರವರ್ತಕ ಆನಂದ್ ಸಿ ಕುಂದರ್,ಪದವಿಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಇದರ ನಿವೃತ್ತ ಸಹಾಯಕ ನಿರ್ದೇಶಕ ಸಿ ಸುರೇಶ್ ತುಂಗ ಶುಭಾಶಂಸನೆಗೈದರು. ಕಾರ್ಯಕ್ರಮದ ಅಧ್ಯಕ್ಷೆಯನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನನೂರು ವಹಿಸಿದ್ದರು. ಕೋಟ ಸಿ ಎ ಬ್ಯಾಂಕ್ ಅಧ್ಯಕ್ಷ ಡಾ.ಕೃಷ್ಣ ಕಾಂಚನ್,ಹೆಚ್ ಜನಾರ್ದನ ಹಂದೆ ಗೌರವ ಉಪಸ್ಥಿತರಿದ್ದರು.ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು.ಸನ್ಮಾನಪತ್ರವನ್ನು ಮಂಜುನಾಥ ಉಪಾಧ್ಯಾ ವಾಚಿಸಿದರು. ಕಾರ್ಯಕ್ರಮವನ್ನು ಬಳಗದ ಉಪಾಧ್ಯಕ್ಷ ಶಶಿಧರ ಮಯ್ಯ ನಿರೂಪಿಸಿದರೆ,ಕಾರ್ಯದರ್ಶಿ ಕೆ.ಶೀನ ವಂದಿಸಿದರು.ಮೆಕ್ಕೆಕಟ್ಟು ಮೇಳದ ಕಲಾವಿದರಿಂದ ಪಾರಿಜಾತ ನರಕಾಸುರ ಪೌರಾಣ ಕ ಪ್ರಸಂಗ ಪ್ರದರ್ಶನಗೊಂಡಿತು