ಕುಂದಾಪುರ: ಇತ್ತೀಚೆಗೆ ಕೆ.ಬಿ.ಐ. ಇಂಟರ್ನ್ಯಾಷನಲ್ ಕರಾಟೆ ಚಾಂಪಿಯನ್ಶಿಪ್ – 2025 ಇವರು ಆಯೋಜಿಸಿರುವ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸೈಂಟ್ ಮೇರಿಸ್ ಪ್ರೌಢಶಾಲೆ, ಕುಂದಾಪುರ ಇಲ್ಲಿಯ ವಿದ್ಯಾರ್ಥಿ ಸುಧನ್ವ ಎಸ್. ಬಿ. ಕಟಾ ಮತ್ತು ಕುಮಿಟೆ (ಫೈಟಿಂಗ್) ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾನೆ. ಈತ ಶ್ರೀಮತಿ ಸುಜಾತ ಮತ್ತು ಶ್ರೀ ಸುಭಾಷ್ ಎಸ್. ಬಿ. ಇವರ ಪುತ್ರನಾಗಿದ್ದಾನೆ ಕೆ.ಡಿ.ಎಫ್. ಕರಾಟೆ (ರಿ.), ಕುಂದಾಪುರ ಇದರ ವಿದ್ಯಾರ್ಥಿಯಾಗಿದ್ದು ಈತನಿಗೆ ಮಹಮ್ಮದ್ ಅಬ್ಜಲ್ ಇವರು ತರಬೇತಿ ನೀಡಿರುತ್ತಾರೆ.