ಕೋಟ : ಶಿಕ್ಷಣ ಸಂಸ್ಥೆಗಳ ಭೌತಿಕ ಮತ್ತು ಶೈಕ್ಷಣಿಕ ಪರಿಸರದ ಅಭಿವೃದ್ಧಿಯಲ್ಲಿ ಪೋಷಕರೊಂದಿಗೆ ಸಮುದಾಯವು ಕೈಜೋಡಿಸಿದಾಗ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡಲು ಸಾಧ್ಯವಾಗುತ್ತದೆ. ಈ ಶಾಲೆ ಆ ನಿಟ್ಟಿನಲ್ಲಿ ಸಾಕಷ್ಟು ಸಾಧಿಸಿದೆ ಎಂದು ಮಣಿಪಾಲ ಟೆಕ್ನಾಲಜಿಸ್ ಲಿ. ಇದರ ಜನರಲ್ ಮ್ಯಾನೇಜರ್ ರೊನಾಲ್ಡ್ ಡಿ.ಸೋಜ ನುಡಿದರು ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಗೆ, ಮಣಿಪಾಲದ ಟಿ. ಎಂ. ಜಿ ಸುನಿಧಿ ಫೌಂಡೇಶನ್ ಟ್ರಸ್ಟ್ ನೀಡಿದ ಕೊಡುಗೆಯ ಚೆಕ್ಕನ್ನು ಹಸ್ತಾಂತರಿಸಿ ಸಾಧ್ಯವಿರುವ ನೆರವಿನ ಭರವಸೆ ನೀಡಿದರಲ್ಲದೆ ಶಾಲೆ ಆಡಳಿತ ವ್ಯವಸ್ಥೆಯನ್ನು ಕೊಂಡಾಡಿದರು. ಶಾಲೆಯ ಪರವಾಗಿ ಚೆಕ್ ಸ್ವೀಕರಿಸಿದ ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್ ಅವರು ಸಂಸ್ಥೆಗೆ ಸಾರ್ವಜನಿಕರ ಸಹಕಾರ ಇನ್ನಷ್ಟು ದೊರಕುವಂತಾಗಲಿ ಎಂದು ಹಾರೈಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ಕೆ.ವಿಶ್ವೇಶ್ವರ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿ ಉಡುಪಿ ಇಂಡಸ್ಟಿçಯಲ್ ಕೋ ಆಪರೇಟಿವ್ ಸೊಸೈಟಿ ಲಿ. ಇದರ ಜನರಲ್ ಮ್ಯಾನೇಜರ್ ರಾಜೇಶ್ ಹೆಗ್ಡೆ ಒಂದನೆಯ ತರಗತಿಯ ವಿದ್ಯಾರ್ಥಿಗಳಿಗೆ ತಮ್ಮ ಸಂಸ್ಥೆ ನೀಡಿದ ಸಮವಸ್ತçವನ್ನು ವಿತರಿಸಿದರು. ಶಾಲೆಯ ಹಿಂದಿನ ವಿದ್ಯಾರ್ಥಿ ಸುಮಾ.ಎನ್ ಹೊಳ್ಳ ಇವರು ನೀಡಿದ ಕೊಡುಗೆಯನ್ನು ಅವರ ಸೋದರ ಕೆ.ಸೀತಾರಾಮ ಸೋಮಯಾಜಿ ಹಸ್ತಾಂತರಿಸಿದರು. ಗದ್ದೆ ಮನೆ ಕೃಷ್ಣ ಪೂಜಾರಿ, ಕಾರ್ಕಡ ಇವರು ನೀಡಿದ ಪ್ರಿಂಟರ್ ಅನ್ನು ಅವರ ಸೋದರನ ಮಗ ಧನುಷ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಣಿಪಾಲ ಟೆಕ್ನಾಲಜಿಸ್ ಲಿ. ಇದರ ಮ್ಯಾನೇಜರ್ ಎಚ್.ಆರ್ ಪ್ರವೀಣ್ ನಾಯಕ್,ಸಾಲಿಗ್ರಾಮ ಪ.ಪಂ ಸದಸ್ಯೆ ಗಿರಿಜಾ ಪೂಜಾರಿ,ಬ್ರಹ್ಮಾವರ ಹೋಬಳಿಯ ಶಿಕ್ಷಣ ಸಂಯೋಜಕ ಪ್ರಕಾಶ್ ಬಿ.ಬಿ, ಕಾರ್ಕಡ ಕ್ಲಸ್ಟರ್ ಸಿ.ಆರ್.ಪಿ ಸವಿತಾ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಂಭು ಭಟ್, ಮತ್ತು ಊರಿನ ಜನಪ್ರತಿನಿಧಿಗಳು, ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಪ್ರಭಾಕರ ಕಾಮತ್ ಸ್ವಾಗತಿಸಿ, ಸಹಶಿಕ್ಷಕ ಬಿ. ಎನ್ ಸತ್ಯನಾರಾಯಣ ವಂದಿಸಿದ ಕಾರ್ಯಕ್ರಮವನ್ನು ಶಿಕ್ಷಕಿ ಗೀತಾ ಪಿ. ನಿರೂಪಿಸಿದರು.