ಕುಂದಾಪುರ : ಕರ್ಕುಂಜೆ ಸಹಕಾರಿ ವ್ಯವಸಾಯಿಕ ಸಂಘದ ನೂತನ ಪ್ರಧಾನ ಕಚೇರಿ ಕಟ್ಟಡ ಬಾಂಡ್ಯ ಶ್ರೀ ಕೆ.ಸುಧಾಕರ ಶೆಟ್ಟಿ ಸಹಕಾರಿ ಸದನವು ನಾಳೆ ಆಗಸ್ಟ್ 24ರಂದು ಶನಿವಾರ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಬಾಂಡ್ಯ ಸುಧಾಕರ ಶೆಟ್ಟಿ ತಿಳಿಸಿದ್ದಾರೆ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೆ ಕಾರ್ಯಾಚರಿಸುತ್ತಿದ್ದ ಸಂಘವು ಪ್ರಸ್ತುತ 2 ಕೋಟಿಗೂ ಮಿಕ್ಕಿ ವೆಚ್ಚದಲ್ಲಿ ಅತ್ಯಾಧುನಿಕ ವ್ಯವಸ್ಥೆಯ ನೂತನ ಕಟ್ಟಡವು ನಿರ್ಮಾಣಗೊಂಡಿದ್ದು ಕಟ್ಟಡಕ್ಕೆ 19 ಸೆಂಟ್ಸ್ ಜಾಗವನ್ನು ದಾನವಾಗಿ ನೀಡಿದ್ದೇನೆ ಎಂದು ಅವರು ತಿಳಿಸಿದರು
ಕಾವ್ರಾಡಿ ಸಹಕಾರಿ ಸಂಘದ ಅಧೀನದಲ್ಲಿದ್ದ ಸಂಘ ಪ್ರತ್ಯೇಕಗೊಂಡು 25 ವರ್ಷ ಸಂದಿದ್ದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯುತ್ತಮ ಸಂಘವಾಗಿ ಗುರುತಿಸಿಕೊಂಡಿದೆ. ಕಳೆದ 25 ವರ್ಷಗಳಿಂದ ಸಂಘವು ಯಾವುದೇ ಚುನಾವಣೆ ಕಾಣದೆ ಆಡಳಿತ ಮಂಡಳಿ ನಡೆದುಕೊಂಡು ಬಂದಿದೆ ಸಹಕಾರಿ ಕೋರ್ಟ್‌ನಲ್ಲಿ ಈವರೆಗೆ ಒಂದೇ ಒಂದು ಪ್ರಕರಣ ಹೊಂದಿರದ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿದೆ ಇದಕ್ಕೆ ಸಂಘವನ್ನು ಪ್ರತಿನಿಧಿಸುತ್ತಿರುವ ಮೂರು ಗ್ರಾಮಗಳ ಜನರ ಪ್ರೋತ್ಸಾಹ ಮತ್ತು ಸಹಕಾರವೇ ಕಾರಣ ಎಂದರು
ಸಂಘವು ಶೇ.99 ಸಾಲ ವಸೂಲಾತಿಯೊಂದಿಗೆ ಎ ಗ್ರೇಡ್ ಸಂಘವಾಗಿ ಗುರುತಿಸಿಕೊಂಡಿದೆ ಸಂಘ ಸ್ಥಾಪನೆಯಾದ 1 ವರ್ಷದಲ್ಲೇ ಬಾಂಡ್ಯದಲ್ಲಿ ಶಾಖೆ ಆರಂಭಿಸಿದ ಹೆಗ್ಗಳಿಕೆ ಹೊಂದಿದೆ ಕಾವ್ರಾಡಿ ಸಂಘದಿಂದ ವಿಭಜನೆಗೊಂಡ ಹೊತ್ತಲ್ಲಿ ಸದಸ್ಯರ ಪಾಲು ಹಣ 2.86 ಲಕ್ಷ ಇದ್ದು ಪ್ರಸ್ತುತ 100 ಕೋಟಿಗೂ ಮಿಕ್ಕಿದೆ. ಗುಲ್ವಾಡಿಯಲ್ಲಿ ಸ್ವಂತ ಗೋದಾಮು ಕಟ್ಟಡ ಕಾರ್ಯಾಚರಿಸುತ್ತಿದೆ. ಗ್ರಾಪಂಗಳು ಸಹಕಾರಿ ಸಂಘಗಳಿಗೆ ಜಾಗ ನೀಡುವಂತಾಗಲು ಸರಕಾರ ತೆಗೆದುಕೊಂಡ ನಿರ್ಧಾರದಿಂದ ಮುಂದಿನ ದಿನಗಳಲ್ಲಿ ಶಾಖೆ ಹಾಗೂ ಗೋದಾಮು ಕಟ್ಟಡಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ಕಷ್ಟ ಎಂದು ಬಂದವರನ್ನು ಯಾವುದೇ ಕ್ಷಣದಲ್ಲಿಯೂ ಕೈಬಿಟ್ಟಿಲ್ಲ. ಮದುವೆಗಾಗಿ ಸಾಲ ಬಯಸಿ ಬಂದವರು ಯಾವುದೇ ಹೊತ್ತಲ್ಲೂ ಬಂದರೂ ಸಾಲ ನೀಡಿ ಕಳುಹಿಸಿದ್ದೇವೆ. ಗ್ರಾಮಾಂತರ ಪ್ರದೇಶಗಳ ಸದಸ್ಯರೆ ಹೆಚ್ಚಿನವರಾಗಿದ್ದು ಅವರ ಪ್ರಾಮಾಣಿಕ ಬೆಂಬಲ, ಪ್ರೋತ್ಸಾಹದಿಂದ ಸಂಘವು ರಾಜ್ಯದ ಶ್ರೇಷ್ಠ ಸಹಕಾರಿ ಸಂಘವಾಗಿ ಗುರುತಿಸಿಕೊಂಡಿದೆ ಎಂದು ಬಾಂಡ್ಯ ಸುಧಾಕರ ಶೆಟ್ಟಿ ನುಡಿದರು
ಅತ್ಯಾಧುನಿಕ ಕಟ್ಟಡ :
ಕರಾವಳಿ ಜಿಲ್ಲೆಯಲ್ಲಿ ಕರ್ಕುಂಜೆ ಸಹಕಾರಿ ವ್ಯವಸಾಯಿಕ ಸಂಘದ ಅತ್ಯಾಧುನಿಕ ವ್ಯವಸ್ಥೆ ಹೊಂದಿರುವ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ನಾಳೆ ಶನಿವಾರ ನಡೆಯಲಿದೆ.
ಆಗಸ್ಟ್ 24ರಂದು ನಾಳೆ ಬೆಳಗ್ಗೆ 9.45ಕ್ಕೆ ಡಿಸಿಸಿ ಬ್ಯಾಂಕ್ ಡಾ. ಎಂ ಎನ್ ರಾಜೇಂದ್ರಕುಮಾರ್ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಹಾಗೂ ಬಸ್ರೂರು ಮಾಹಾಲಿಂಗೇಶ್ವರ ದೇವಳ ಆಡಳಿತ ಧರ್ಮದರ್ಶಿಗಳಾದ ಬಿ ಅಪ್ಪಣ್ಣ ಹೆಗ್ಡೆಯವರು ಡಾ. ಎಂ ಎನ್ ರಾಜೇಂದ್ರ ಕುಮಾರ್ ಸಭಾ ಭವನ, ಸಂಸದ ಬಿ.ವೈ. ರಾಘವೇಂದ್ರ ಬ್ಯಾಂಕಿಂಗ್ ವಿಭಾಗ, ಬೈಂದೂರು ಶಾಸಕ ಗುರುರಾಜ ಗಂಟೆಹೊಳೆ ಭದ್ರತಾ ಕೊಠಡಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಗೋದಾಮು, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ದುರ್ಗಾ ಪರಮೇಶ್ವರಿ ಭೋಜನ ಶಾಲೆ, ಕುಂದಾಪುರ ಶಾಸಕ ಕಿರಣ್ ಕುಮಾರ ಕೊಡ್ಲಿ ಸಭಾಭವನ ಉದ್ಘಾಟಿಸುವರು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಬಿ. ಎಂ.ಸುಕುಮಾರ ಶೆಟ್ಟಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಮಹೇಶ್ ಹೆಗ್ಡೆ ಎಸ್. ರಾಜು ಪೂಜಾರಿ ಯಡ್ತರೆ, ಟಿಎಪಿಸಿಎಂಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಸಹಕಾರ ಸಂಘಗಳ ಉಪನಿಬಂಧಕ ಲಾವಣ್ಯ ಕೆ. ಆರ್., ಸಹಾಯಕ ನಿಬಂಧಕಿ ಸುಕನ್ಯಾ, ಹಾಲು ಒಕ್ಕೂಟ ಮಾಜಿ ನಿರ್ದೇಶಕ ಬಾಂಡ್ಯ ಸುಬ್ಬಣ್ಣ ಶೆಟ್ಟಿ ಕರ್ಕುಂಜೆ ಗ್ರಾಪಂ ಅಧ್ಯಕ್ಷ ಬಿಜ್ರಿ ರಾಜೀವ ಶೆಟ್ಟಿ ಆಜ್ರಿ-ಕೊಡ್ಲಾಡಿ ಗ್ರಾಪಂ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಗುಲ್ವಾಡಿ ಗ್ರಾಪಂ ಅಧ್ಯಕ್ಷೆ ಶೋಭಾ ಭಾಗವಹಿಸಲಿದ್ದು ಮಧ್ಯಾಹ್ನ 2 ಗಂಟೆಗೆ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಾಗಶ್ರೀ ಯಕ್ಷಗಾನ ಪ್ರದರ್ಶನ ಜರುಗಲಿದೆ ಎಂದು ಬಾಂಡ್ಯ ಸುಧಾಕರ ಶೆಟ್ಟಿ ತಿಳಿಸಿದ್ದಾರೆ